ಪರಿವೀಕ್ಷಣಾ ವಿಮಾನವೊಂದು ಪತನವಾಗುತ್ತಿರುವ ಕೊನೆ ಕ್ಷಣದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಮಾನ ಅಪಘಾತದಲ್ಲಿ ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ.
ಮಾಲ್ಟಾದ ಈ ವಿಮಾನದಲ್ಲಿ ಮೂವರು ಫ್ರೆಂಚ್ ಮಿಲಿಟರಿ ಅಧಿಕಾರಿಗಳು ಹಾಗೂ ಇಬ್ಬರು ಖಾಸಗಿ ಗುತ್ತಿಗೆದಾರರು ಇದ್ದರೆನ್ನಲಾಗಿದ್ದು, ಲಿಬಿಯಾದ ಮಿಸ್ತಾರಾಕ್ಕೆ ವಿಮಾನ ತೆರಳುತ್ತಿತ್ತೆಂದು ಹೇಳಲಾಗಿದೆ.
ಲೌರೆಂಟ್ ಅಜ್ಜೋಪರ್ದಿ ಎಂಬಾಕೆ ತನ್ನ ಕಾರಿನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಡ್ಯಾಶ್ ಬೋರ್ಡ್ ಮೇಲೆ ಅಳವಡಿಸಲಾಗಿದ್ದ ಕ್ಯಾಮರಾದಲ್ಲಿ ವಿಮಾನ ಪತನದ ದೃಶ್ಯ ಸೆರೆಯಾಗಿದೆ. ಅತ್ತಿತ್ತ ತೂಗಾಡುತ್ತಾ ಬಂದ ವಿಮಾನ ಕ್ಷಣಾರ್ಧದಲ್ಲೇ ನೆಲಕ್ಕಪ್ಪಳಿಸಿದ್ದು, ಈ ಸಂದರ್ಭದಲ್ಲಿ ಭಾರೀ ಸ್ಪೋಟ ಸಂಭವಿಸಿತೆಂದು ಪ್ರತ್ಯಕ್ಷದರ್ಶಿ ಲೌರೆಂಟ್ ತಿಳಿಸಿದ್ದಾರೆ.