ಕರವಾಚೌತ್ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಮಹಿಳೆಯ ಕೈ ಫೋಟೋ ಇದಾಗಿದ್ದು, ಕೈ ಮೇಲೆಲ್ಲ ಗುಳ್ಳೆಗಳಾದಂತೆ ಗೋಚರಿಸ್ತಾ ಇದೆ. ಕರವಾಚೌತ್ ಗಾಗಿ ಮೆಹಂದಿ ಹಚ್ಚಿದ್ದ ಮಹಿಳೆ ಕೈಗೆ ಸೋಂಕು ತಗುಲಿ ಹೀಗಾಗಿದೆ ಎನ್ನಲಾಗ್ತಾ ಇದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರುವ ಈ ಫೋಟೋ ಮಧ್ಯಪ್ರದೇಶದ್ದು. ಕಡಿಮೆ ಬೆಲೆಗೆ ಸಿಗುವ ಚೀನಾದಲ್ಲಿ ತಯಾರಾದ ಮೆಹಂದಿ ಹಚ್ಚಿದ್ದ ಮಹಿಳೆ ಕೈ ಕೆಂಪಗಾಗುವ ಬದಲು ಗುಳ್ಳೆಗಳಿಂದ ತುಂಬಿ ಹೋಗಿದೆ. ಆದ್ರೆ ಫೋಟೋ ಬಗ್ಗೆ ಸಾಕಷ್ಟು ಅನುಮಾನಗಳಿವೆ.
ಅನೇಕರು ಇದು ಹಳೆ ಫೋಟೋ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಫೋಟೋ ಶಾಪ್ ಮೂಲಕ ಹೀಗೆ ಮಾಡಲಾಗಿದೆ ಎನ್ನುತ್ತಿದ್ದಾರೆ. ಇದು ಎಷ್ಟು ಸತ್ಯ ಎಂಬುದು ಇನ್ನೂ ಬಹಿರಂಗವಾಗಿಲ್ಲ.