ವಿಶ್ವ ಬ್ರೆಡ್ ದಿನಾಚರಣೆ ಅಂಗವಾಗಿ ಕೊಯಮತ್ತೂರಿನ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು, ಐವರು ನುರಿತ ಚೆಫ್ ಗಳ ಜೊತೆಗೂಡಿ ಅತಿ ದೊಡ್ಡ ಬರ್ಗರ್ ಸಿದ್ದಪಡಿಸಿದ್ದು, ಸಾರ್ವಜನಿಕ ಪ್ರದರ್ಶನದ ನಂತರ ಇದನ್ನು ಅನಾಥಾಲಯಕ್ಕೆ ನೀಡಲಾಗಿದೆ.
ಸುಮಾರು 65 ಕೆ.ಜಿ. ತೂಕ ಹೊಂದಿದ್ದ ಈ ಬರ್ಗರ್, 1.5 ಅಡಿ ಎತ್ತರ ಹಾಗೂ 3 ಅಡಿ ಅಗಲವಿದ್ದು, 47 ಮಂದಿ ಕೇಟರಿಂಗ್ ವಿದ್ಯಾರ್ಥಿಗಳು ಹಾಗೂ ಐವರು ಚೆಫ್ ಗಳು ಸತತ 16 ಗಂಟೆಗಳ ಕಾಲ ಶ್ರಮ ವಹಿಸಿ ಇದನ್ನು ಸಿದ್ದಪಡಿಸಿದ್ದರು.
ಈ ಬರ್ಗರ್ ತಯಾರಿಕೆಗೆ 35 ಕೆ.ಜಿ. ಮೈದಾ, 2 ಕೆ.ಜಿ. ಸಕ್ಕರೆ, ತಲಾ 1 ಕೆ.ಜಿ. ಉಪ್ಪು ಮತ್ತು ಯೀಸ್ಟ್, 12 ಕೆ.ಜಿ. ಅಡುಗೆ ಎಣ್ಣೆ, 25 ಲೀಟರ್ ನೀರು ಬಳಸಲಾಗಿತ್ತು. ಪ್ರದರ್ಶನದ ವೇಳೆ ಈ ಬರ್ಗರ್ ವೀಕ್ಷಕರ ಗಮನ ಸೆಳೆದಿತ್ತು.