ಮಲಯಾಳಂನಲ್ಲಿ ಭರ್ಜರಿ ಹಿಟ್ ಆಗಿರೋ ಮೋಹನ್ ಲಾಲ್ ನಟನೆಯ ‘ಪುಲಿಮುರುಗನ್’ ಚಿತ್ರ ಬೇರೆ ಭಾಷೆಗಳಿಗೆ ರಿಮೇಕ್ ಆಗ್ತಾ ಇದೆ. ಭಾರೀ ಮೊತ್ತಕ್ಕೆ ಎಲ್ಲಾ ಭಾಷೆಗಳ ರಿಮೇಕ್ ಹಕ್ಕುಗಳನ್ನು ರಮೇಶ್ ಪಿ.ಪಿಳ್ಳೈ ಖರೀದಿಸಿದ್ದಾರೆ.
ಸ್ಟಾರ್ ನಟರನ್ನು ಹಾಕಿಕೊಂಡು ರಿಮೇಕ್ ಮಾಡಲು ಸಿದ್ಧತೆ ನಡೆದಿದೆ. ಆದ್ರೆ ಹೀರೋ ಯಾರಾಗ್ತಾರೆ ಅನ್ನೋ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ ‘ಪುಲಿಮುರುಗನ್’ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್ ನಲ್ಲಿ ನಟ ಪ್ರಭಾಸ್ ಮಿಂಚಲಿದ್ದಾರೆ. ಹಿಂದಿ ಆವೃತ್ತಿಯಲ್ಲಿ ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ನಟಿಸ್ತಾರೆ ಅನ್ನೋ ಸುದ್ದಿಯಿದೆ.
ಮಲಯಾಳಂನಲ್ಲಿ ಚಿತ್ರ ನಿರ್ದೇಶನ ಮಾಡಿರುವ ವೈಶಾಕ್ ಹಾಗೂ ನಿರ್ಮಾಪಕ ಥೊಮಿಚನ್ ಮುಲಾಕುಪ್ಪದಮ್ ರಿಮೇಕ್ ನಿರ್ಮಾಣದಲ್ಲೂ ಸಾಥ್ ಕೊಡುವ ಸಾಧ್ಯತೆ ಇದೆ.