ತಿನ್ನೋ ಸ್ಪರ್ಧೆ ಅಂದ್ರೆ ಸಾಕು ಎಲ್ರೂ ನಾ ಮುಂದು ತಾ ಮುಂದು ಅಂತಾರೆ. ಮೆಣಸಿನಕಾಯಿ ತಿನ್ನುವ ಸ್ಪರ್ಧೆ ಇದ್ರಂತೂ ಅದನ್ನು ನೋಡೋದ್ರಲ್ಲೇ ಹೆಚ್ಚು ಮಜಾ ಇದೆ. ಭಯಂಕರ ಖಾರದ ಮೆಣಸಿನ ಕಾಯಿ ತಿಂದು ಅವರು ಕಣ್ಣಲ್ಲಿ ಮೂಗಲ್ಲಿ ನೀರು ಸುರಿಸ್ತಾ ಇದ್ರೆ ಉಳಿದವರು ಅದನ್ನು ನೋಡಿ ಎಂಜಾಯ್ ಮಾಡ್ತಾರೆ.
ಅಮೆರಿಕದಲ್ಲಿ ಇದೇ ರೀತಿಯ ಸ್ಪರ್ಧೆಯಲ್ಲಿ ಮೆಣಸಿನಕಾಯಿ ತಿಂದ 47 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆ ಸೇರಿದ್ದಾನೆ. ಇವನು ಆಯ್ಕೆ ಮಾಡಿಕೊಂಡಿದ್ದು ‘ಪ್ರೇತ ಮೆಣಸು’ ಇದನ್ನ ಭೂತ್ ಜೊಲೊಕಿಯಾ ಅಂತಾನೂ ಕರೆಯುತ್ತಾರೆ.
ಇದು ತಬಾಸ್ಕೋ ಸಾಸ್ ಗಿಂತ 400 ಪಟ್ಟು ಖಾರವಿರುತ್ತದೆ. ಪ್ರೇತ ಮೆಣಸನ್ನು ರುಬ್ಬಿ ನುಣ್ಣನೆಯ ಪೇಸ್ಟ್ ಮಾಡಿಕೊಂಡು ಆತ ಬರ್ಗರ್ ನಲ್ಲಿ ಹಾಕಿ ತಿಂದ. ಕೂಡಲೇ ಅವನಿಗೆ ವಾಂತಿ ಶುರುವಾಯ್ತು, ಹೊಟ್ಟೆ ಮತ್ತು ಎದೆ ನೋವಿನಿಂದ ನರಳಲಾರಂಭಿಸಿದ.
ಅವನನ್ನು ಪರೀಕ್ಷಿಸಿದ ವೈದ್ಯರಿಗೆ ಶಾಕ್, ಮೆಣಸಿನಕಾಯಿಯ ಖಾರದ ಹೊಡೆತಕ್ಕೆ ಅವನ ಅನ್ನನಾಳವೇ ಒಡೆದು ಹೋಗಿತ್ತು. ಅಷ್ಟೇ ಅಲ್ಲ ಗಂಟಲಿನಲ್ಲಿ ರಂಧ್ರವಾಗಿತ್ತು. ಆ ವ್ಯಕ್ತಿ ಬದುಕಿದ್ದೇ ಒಂದು ಪವಾಡ. ಮೆಣಸಿನಕಾಯಿ ತಿನ್ನುವ ಹುಚ್ಚಿಗೆ ಬಿದ್ದ ಆತ 23 ದಿನ ಆಸ್ಪತ್ರೆ ಸೇರಿದ್ದ. ಕೊನೆಗೆ ಕೊಂಚ ಸುಧಾರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾನೆ, ಇನ್ನು ಮಾತ್ರ ಮೆಣಸಿನಕಾಯಿ ಸಹವಾಸವೇ ಬೇಡ ಎನ್ನುತ್ತಿದ್ದಾನೆ.