ಅಹ್ಮದಾಬಾದ್ ನಿಂದ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಏರ್ ಇಂಡಿಯಾ ವಿಮಾನದ ಟೈರ್, ಲ್ಯಾಂಡಿಂಗ್ ವೇಳೆ ಬರ್ಸ್ಟ್ ಆಗಿದ್ದು, ಅದೃಷ್ಟವಶಾತ್ ವಿಮಾನ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ವಿಮಾನ ಸಿಬ್ಬಂದಿ ಸೇರಿದಂತೆ 128 ಮಂದಿ ಪ್ರಯಾಣಿಕರನ್ನು ಹೊಂದಿದ್ದ ಈ ವಿಮಾನ, ಇಂದು ಬೆಳಿಗ್ಗೆ ಲ್ಯಾಂಡ್ ಆಗುವ ವೇಳೆ ಈ ಅವಘಡ ಸಂಭವಿಸಿದೆ. ಪೈಲೆಟ್, ಇಂತಹ ಸನ್ನಿವೇಶದಲ್ಲೂ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಮಾಡಿದ್ದಾರೆ. ಈ ವಿಮಾನ ಮುಂಬೈನಿಂದ ಮತ್ತೇ ರಾಯ್ಪುರಕ್ಕೆ ಪ್ರಯಾಣ ಬೆಳೆಸಬೇಕಿತ್ತಾದರೂ ಟೈರ್ ಬರ್ಸ್ಟ್ ಆದ ಕಾರಣ ಪ್ರಯಾಣಿಕರಿಗೆ ಬದಲಿ ವಿಮಾನದ ವ್ಯವಸ್ಥೆ ಮಾಡಲಾಗಿದೆ.