ಪರೀಕ್ಷಾ ಅಕ್ರಮಗಳಲ್ಲಿ ಬಿಹಾರ ಬಿಟ್ರೆ ಮುಂಚೂಣಿಯಲ್ಲಿರುವ ರಾಜ್ಯ ಅಂದ್ರೆ ಉತ್ತರಪ್ರದೇಶ. ಇಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಾಕಷ್ಟು ಚಾನ್ಸ್ ಇದೆ. ಹಾಗಾಗಿಯೇ 2016-17ರ ಸಾಲಿನ ಬೋರ್ಡ್ ಎಕ್ಸಾಮ್ ಕಟ್ಟಿದ ಮಧ್ಯಪ್ರದೇಶ ಮತ್ತು ರಾಜಸ್ಥಾನದ ಹಲವು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಉತ್ತರ ಪ್ರದೇಶದ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಆಗ್ರಾ ಒಂದರಲ್ಲೇ ಸುಮಾರು 4000 ವಿದ್ಯಾರ್ಥಿಗಳು ಉತ್ತರ ಪ್ರದೇಶ ಪರೀಕ್ಷಾ ಮಂಡಳಿಗೆ ವರ್ಗಾವಣೆ ಕೇಳಿದ್ದಾರೆ. ಈ ವರ್ಗಾವಣೆ ಪ್ರಮಾಣ ಪತ್ರಗಳು ಅನುಮಾನ ಮೂಡಿಸಿವೆ, ಕಾರಣ ಬಹುತೇಕ ಸರ್ಟಿಫಿಕೇಟ್ ಗಳಲ್ಲಿ ಜಿಲ್ಲಾ ಶಿಕ್ಷಣ ಅಧಿಕಾರಿಗಳ ಸಹಿಯೇ ಇಲ್ಲ. ಉಳಿದ ವಿವರಗಳು ಕೂಡ ಸ್ಪಷ್ಟವಾಗಿಲ್ಲ.
ಮೂಲಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಪರೀಕ್ಷಾ ಗೋಲ್ ಮಾಲ್ ನಡೆಸುವ ದೊಡ್ಡ ಮಾಫಿಯಾ ತಲೆಯೆತ್ತಿದೆ. 15,000-20,000 ಹಣ ಪಡೆಯುವ ಇವರು ಪರೀಕ್ಷೆಯಲ್ಲಿ ನಕಲು ಮಾಡಿ, ಒಳ್ಳೆ ಅಂಕ ಪಡೆಯಲು ವಿದ್ಯಾರ್ಥಿಗಳಿಗೆ ನೆರವಾಗುತ್ತಾರೆ. ಹಾಗಾಗಿ ಅನುಮಾನಾಸ್ಪದ ವರ್ಗಾವಣೆ ಪ್ರಮಾಣಪತ್ರಗಳನ್ನು ಪರಿಶೀಲಿಸಲು ಶಾಲೆಗಳಿಂದ ಅಸಲಿ ಪ್ರಮಾಣಪತ್ರಗಳನ್ನು ತರಿಸಿಕೊಳ್ಳಲಾಗ್ತಿದೆ. ಪರೀಕ್ಷಾ ಮಂಡಳಿ ಕೂಡ ಅಕ್ರಮಗಳಿಗೆ ಬ್ರೇಕ್ ಹಾಕಲು ಸಜ್ಜಾಗಿದೆ. ನಕಲಿ ವಿದ್ಯಾರ್ಥಿಗಳ ಅರ್ಜಿ ಪತ್ತೆ ಮಾಡಿ ತಿರಸ್ಕರಿಸಬಲ್ಲ ಸಾಫ್ಟ್ ವೇರ್ ಒಂದನ್ನು ಅಳವಡಿಸಿದೆ.