ಜೈಪುರ: ರಾಜಕೀಯ ಸಮಾವೇಶ ಎಂದ ಮೇಲೆ ಮುಖಂಡರು, ಬೆಂಬಲಿಗರು ಹೆಚ್ಚಾಗಿ ಕಾಣಿಸಿಕೊಳ್ಳುವುದು ಸಾಮಾನ್ಯ.
ಹೀಗೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖಂಡರು, ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ವೇದಿಕೆ ಏರಿದ ಪರಿಣಾಮ ವೇದಿಕೆಯೇ ಕುಸಿದು ಬಿದ್ದ ಘಟನೆ ರಾಜಸ್ತಾನದ ಟೋಂಕ್ ನಲ್ಲಿ ನಡೆದಿದೆ. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಕೂಡ ವೇದಿಕೆಯಲ್ಲಿದ್ದರು. ಅದೃಶ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಕೆಲವರಿಗೆ ತರಚಿದ ಗಾಯಗಳಾಗಿವೆ. ಟೋಂಕ್ ನಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶ ಹಿನ್ನಲೆಯಲ್ಲಿ ಹೆಚ್ಚಿನ ಜನ ಸೇರಿದ್ದರು.
ವೇದಿಕೆಯಲ್ಲಿ ಅಶೋಕ್ ಗೆಹ್ಲೊಟ್ ಸೇರಿದಂತೆ ಪಕ್ಷದ ಹಲವು ಮುಖಂಡರು ಇದ್ದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಮುಖಂಡರು ವೇದಿಕೆ ಏರಿದ್ದು, ಆಗ ಹೆಚ್ಚಿನ ಭಾರದಿಂದ ವೇದಿಕೆ ಕುಸಿದು ಬಿದ್ದಿದೆ. ಅಶೋಕ್ ಗೆಹ್ಲೊಟ್ ಅವರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆದೊಯ್ಯಲಾಗಿದೆ.