ಕಳೆದ ತಿಂಗಳಷ್ಟೆ ಬಿಹಾರದ ಪಾಟ್ನಾ ರೈಲು ನಿಲ್ದಾಣದಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಈ ವೈಫೈ ಬಳಕೆಯಲ್ಲಿ ಉಳಿದ 23 ನಿಲ್ದಾಣಗಳ ಪೈಕಿ ಪಾಟ್ನಾ ಮೊದಲ ಸ್ಥಾನದಲ್ಲಿದೆ. ಬಹುತೇಕ ಎಲ್ಲ ಪ್ರಯಾಣಿಕರೂ ಇಂಟರ್ನೆಟ್ ಬಳಸ್ತಿದ್ದಾರೆ, ವಿಷಾದದ ಸಂಗತಿ ಅಂದ್ರೆ ಬಹುತೇಕರು ಸರ್ಚ್ ಮಾಡ್ತಿರೋದು ಅಶ್ಲೀಲ ಕಂಟೆಂಟ್ ಮತ್ತು ವಿಡಿಯೋಗಳನ್ನು.
ಈಗಾಗ್ಲೇ ದೇಶದ 23 ರೈಲ್ವೆ ಸ್ಟೇಶನ್ ಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ, ಎಲ್ಲ ಪ್ರಮುಖ 400 ನಿಲ್ದಾಣಗಳಲ್ಲೂ ಈ ಸೇವೆ ಒದಗಿಸಲು ಯೋಜನೆ ಹಾಕಿಕೊಂಡಿರುವುದಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. ಆದ್ರೆ ಈ ಸೇವೆಯನ್ನು ಜನರು ದುರ್ಬಳಕೆ ಮಾಡಿಕೊಳ್ತಿರೋದಂತೂ ಸತ್ಯ.
ಫ್ರೀ ವೈಫೈನಲ್ಲಿ ಪೋರ್ನ್ ಸೈಟ್ ಗಳ ಹುಡುಕಾಟ ನಡೆಸಿರುವ ನಿಲ್ದಾಣಗಳಲ್ಲಿ ಮೊದಲ ಸ್ಥಾನ ಪಾಟ್ನಾಗಾದ್ರೆ, ಎರಡನೇ ಸ್ಥಾನ ಜೈಪುರಕ್ಕೆ. ಬೆಂಗಳೂರು ಹಾಗೂ ದೆಹಲಿ ನಂತರದ ಸ್ಥಾನದಲ್ಲಿವೆ. 2 ವರ್ಷಗಳ ಹಿಂದೆ ಪಾಟ್ನಾದ ಹೃದಯ ಭಾಗದಲ್ಲಿ ಸರ್ಕಾರ, ಫ್ರೀ ವೈಫೈ ಸೌಲಭ್ಯ ನೀಡಿತ್ತು. ಅಲ್ಲಿ ಕೂಡ ಸಾರ್ವಜನಿಕರು ಸಿನಿಮಾಗಳನ್ನು ಡೌನ್ ಲೋಡ್ ಮಾಡಲು ಹೆಚ್ಚಾಗಿ ಉಚಿತ ವೈಫೈ ಬಳಸಿದ್ದರು.