ಓಡಿಶಾದ ಹಳ್ಳಿಯೊಂದರಲ್ಲಿ ಅಮಾನವೀಯ ಘಟನೆ ನಡೆದಿದೆ. ಮಾಟಗಾತಿಯೆಂದು ಆರೋಪಿಸಿ ಸಾರ್ವಜನಿಕರು ಮಹಿಳೆಯೊಬ್ಬಳ ಬಟ್ಟೆ ಬಿಚ್ಚಿ ಮನಬಂದಂತೆ ಥಳಿಸಿದ್ದಾರೆ.
ದೇರಾಪಥರ್ ಗ್ರಾಮದಲ್ಲಿ ಕಲಸಿ ದೇವತೆಯ ಅವತಾರವೆಂದು ಹೇಳಿಕೊಳ್ಳುತ್ತಿದ್ದ ಸಣ್ಣ ಹುಡುಗಿ, ತನ್ನ ಜೊತೆಗಿದ್ದ ಮಹಿಳೆ ದುಸಾಸನ್ ದೆಹುರಿ ಎಂಬಾಕೆ ಮರದಡಿ ಕುಳಿತು ಮಾಟ ಮಂತ್ರ ಅಭ್ಯಾಸ ಮಾಡುತ್ತಿದ್ಲು ಅಂತಾ ಊರವರ ಬಳಿ ಹೇಳಿದ್ದಾಳೆ.
ಕೊನೆಗೆ ಮರದಡಿಯಲ್ಲಿ ಎಲೆಗಳಿಂದ ಮಾಡಿದ ತಟ್ಟೆಯೊಂದನ್ನು ಇಟ್ಟು ತನ್ನ ಕುಟುಂಬದವರು ಮತ್ತು ಗ್ರಾಮಸ್ಥರ ಜೊತೆ ದುಸಾಸನ್ ಎಂಬ ಮಹಿಳೆಯ ಮನೆಗೆ ಹೋಗಿದ್ದಾಳೆ. ನೀನು ಮಾಟ ಮಾಡಿ ಎಷ್ಟೋ ಜನರನ್ನು ಕೊಂದು ಹಾಕಿದ್ದೀಯಾ ಅಂತಾ ಕೂಗಿದ್ದಾಳೆ.
ದೇವತೆಯ ಅವತಾರವಾಗಿರುವ ಹುಡುಗಿ, ಮಾಟಗಾತಿಯನ್ನು ಪತ್ತೆ ಮಾಡಿದ್ದಾಳೆ ಎಂದುಕೊಂಡ ನೂರಾರು ಗ್ರಾಮಸ್ಥರು, ಅಮಾಯಕ ಮಹಿಳೆಯನ್ನು ರಸ್ತೆಗೆ ಎಳೆತಂದು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಆಕೆಯ ಬಟ್ಟೆ ಬಿಚ್ಚಿಸಿ ಥಳಿಸಿದ್ದಾರೆ. ಹೇಗೋ ಗ್ರಾಮಸ್ಥರ ಕೈಯಿಂದ ಬಚಾವಾದ ಮಹಿಳೆ, ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದ್ರೆ ಪೊಲೀಸರು ಮಾತ್ರ ಅಮಾನುಷ ಕೃತ್ಯ ಎಸಗಿದವರನ್ನು ಇನ್ನೂ ಬಂಧಿಸಿಲ್ಲ.