Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಜೊತೆಯಾಟದಲ್ಲಿ ಹರಿದು ಬಂತು 594 ರನ್

$
0
0
ಜೊತೆಯಾಟದಲ್ಲಿ ಹರಿದು ಬಂತು 594 ರನ್

ಮುಂಬೈ: ಕ್ರೀಡೆಯಲ್ಲಿ ದಾಖಲೆಗಳು ನಿರ್ಮಾಣವಾಗುವುದು, ಅದನ್ನು ಇನ್ನೊಬ್ಬರು ಅಳಿಸಿ ಹಾಕುವುದು ಸಹಜ. ಅಂತಹ ಅಪರೂಪದ ದಾಖಲೆ ಈ ರಣಜಿ ಪಂದ್ಯಾವಳಿಯಲ್ಲಿ ದಾಖಲಾಗಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ಹಾಗೂ ದೆಹಲಿ ನಡುವಿನ ಪಂದ್ಯದಲ್ಲಿ ಮಹಾರಾಷ್ಟ್ರ ಬ್ಯಾಟ್ಸ್ ಮನ್ ಗಳು ಜೊತೆಯಾಟದಲ್ಲಿ ದಾಖಲೆ ಬರೆದಿದ್ದಾರೆ. ನಾಯಕ ಸ್ವಪ್ನಿಲ್ ಗುಗಾಲೆ, ಅಂಕಿತ್ ಬಾವ್ನೆ ಜೊತೆಯಾಟದಲ್ಲಿ 594 ರನ್ ಗಳಿಸುವ ಮೂಲಕ ಗಮನ ಸೆಳೆದರು. ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ 594 ರನ್ ಜೊತೆಯಾಟ 2 ನೇ ಸ್ಥಾನದಲ್ಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಆಟಗಾರರಾದ ಮಹೇಲ ಜಯವರ್ಧನೆ ಹಾಗೂ ಕುಮಾರ ಸಂಗಕ್ಕಾರ 624 ರನ್ ಗಳಿಸಿದ್ದು, ಜೊತೆಯಾಟದ ದಾಖಲೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

1946-47 ರಲ್ಲಿ ಬರೋಡಾದ ವಿಜಯ್ ಹಜಾರೆ ಹಾಗೂ ಗುಲ್ ಮಹಮ್ಮದ್ ಹೋಳ್ಕರ್ 577 ರನ್ ಗಳಿಸಿದ್ದರು. ಇದೀಗ ಸ್ವಪ್ನಿಲ್ ಗುಗಾಲೆ ಅಜೇಯ 351 ರನ್ ಹಾಗೂ ಅಂಕಿತ್ ಅಜೇಯ 258 ರನ್ ಗಳಿಸುವ ಮೂಲಕ 70 ವರ್ಷಗಳ ಹಿಂದಿನ ರಣಜಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. 2012ರಲ್ಲಿ ಸೌರಾಷ್ಟ್ರ ಪರವಾಗಿ ಆಟವಾಡಿದ ಸಾಗರ್ ಜೊಕಿಯಾನಿ, ರವೀಂದ್ರ ಜಡೇಜ 3 ನೇ ವಿಕೆಟ್ ಜೊತೆಯಾಟದಲ್ಲಿ 539 ರನ್ ಗಳಿಸಿದ್ದರು.

 


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>