ನವದೆಹಲಿ: ಆರ್.ಡಿ., ಎಸ್.ಬಿ. ಪೋಸ್ಟ್ ಕಾರ್ಡ್, ಸ್ಟಾಂಪ್, ಮನಿಯಾರ್ಡರ್ ಮೊದಲಾದ ಕಾರ್ಯ ಚಟುವಟಿಕೆ ನಡೆಯುತ್ತಿದ್ದ ಅಂಚೆ ಕಚೇರಿಗಳಲ್ಲಿ ಬೇರೆ ವಸ್ತುಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ.
ಗೋಲ್ಡ್ ಬಾಂಡ್, ಗೋಲ್ಡ್ ಕಾಯಿನ್, ಗಂಗಾಜಲ ಮೊದಲಾದವುಗಳು ಈಗಾಗಲೇ ಅಂಚೆ ಕಚೇರಿ ಮೂಲಕ ಗ್ರಾಹಕರನ್ನು ತಲುಪುತ್ತಿವೆ. ಈಗ ಅಂಚೆ ಕಚೇರಿಗಳ ಮೂಲಕ ಬೇಳೆ, ಕಾಳುಗಳನ್ನು ಗ್ರಾಹಕರಿಗೆ ತಲುಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಬೇಳೆ, ಕಾಳುಗಳ ಬೆಲೆ ಗಗನಕ್ಕೇರಿರುವ ಹಿನ್ನಲೆಯಲ್ಲಿ ಹಬ್ಬದಲ್ಲಿ ಜನರಿಗೆ ಕೊರತೆ ಆಗಬಾರದೆಂಬ ಕಾರಣದಿಂದ ಅಂಚೆ ಕಚೇರಿಗಳ ಮೂಲಕ ವಿತರಿಸಲಾಗುವುದು.
ದೇಶದ ಆಯ್ದ ಅಂಚೆ ಕಚೇರಿಗಳಲ್ಲಿ ಬೇಳೆ, ಕಾಳು ಮಾರಾಟ ಮಾಡುವ ಕುರಿತು ಅಂತರ ಸಚಿವಾಲಯದ ಸಭೆಯಲ್ಲಿ ನಿರ್ಧರಿಸಲಾಗಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಹೇಮ ಪಾಂಡೆ ಈ ಕುರಿತು ಮಾಹಿತಿ ನೀಡಿದ್ದು, ಆಯ್ದ ಅಂಚೆ ಕಚೇರಿಗಳಲ್ಲಿ ರಿಯಾಯಿತಿಯಲ್ಲಿ ಬೇಳೆ ಕಾಳು ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.