ಚಿಕ್ಕೋಡಿ: ಸಮೀಪದ ನಿಪ್ಪಾಣಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಸುಮಾರು 10 ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಹೆದ್ದಾರಿ ಪಕ್ಕದಲ್ಲಿ ನಿಂತು ಮೈಮಾಟ ಪ್ರದರ್ಶಿಸುತ್ತಾರೆ. ಇವರನ್ನು ಕಂಡ ಕೆಲವು ಕಾಲೇಜ್ ವಿದ್ಯಾರ್ಥಿಗಳು, ವಾಹನ ಸವಾರರು, ಚಾಲಕರು ಮಾರು ಹೋಗುತ್ತಾರೆ. ಹೀಗೆ ಗಿರಾಕಿಗಳನ್ನು ಹಿಡಿದು ಪೊದೆಯೊಳಗೆ ಹೋದ ಕೂಡಲೇ ಗ್ಯಾಂಗ್ ಒಂದು ಎಂಟ್ರಿ ಕೊಡುತ್ತದೆ. ಅವರನ್ನು ಬೆದರಿಸಿ, ಹಣ, ಮೊಬೈಲ್ ದೋಚುತ್ತದೆ ಎನ್ನಲಾಗಿದೆ.
ಇದೆಲ್ಲಾ ಪ್ರೀ ಪ್ಲಾನ್ ಆಗಿ ನಡೆಯುತ್ತದೆ. ಹಣ ಕಳೆದುಕೊಂಡವರು ಮರ್ಯಾದೆಗೆ ಅಂಜಿ ದೂರು ನೀಡುವ ಗೋಜಿಗೆ ಹೋಗುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮೀಪದ ಗ್ರಾಮಗಳ ಜನ ಒತ್ತಾಯಿಸಿದ್ದಾರೆ.