ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಧೃವ’ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಯಶಸ್ಸಿನ ನಿರೀಕ್ಷೆಯಲ್ಲಿರುವ ರಾಮ್ ಚರಣ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಮೊದಲ ಟೀಸರ್ ಗಮನ ಸೆಳೆಯುವಂತಿದೆ. ತಮಿಳಿನ ಯಶಸ್ವಿ ಚಿತ್ರ ‘ತನಿ ಒರುವನ್’ ರಿಮೇಕ್ ಆಗಿರುವ ‘ಧೃವ’ದಲ್ಲಿ ರಾಮ್ ಚರಣ್ ಖಡಕ್ ಲುಕ್ ನಲ್ಲಿ ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ. ಅದ್ಧೂರಿ ವೆಚ್ಛದಲ್ಲಿ ನಿರ್ಮಾಣವಾಗಿರುವ ಚಿತ್ರ ಮೇಕಿಂಗ್ ನಿಂದ ಭಾರೀ ಸದ್ದು ಮಾಡುತ್ತಿದೆ.
ಸುರೇಂದ್ರ ರೆಡ್ಡಿ ನಿರ್ದೇಶನದ ಈ ಬಹು ನಿರೀಕ್ಷೆಯ ಚಿತ್ರಕ್ಕೆ ಅಲ್ಲು ಅರವಿಂದ್ ಬಂಡವಾಳ ಹೂಡಿದ್ದಾರೆ. ಟೀಸರ್ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.