Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಹೊತ್ತಿ ಉರೀತು ಮತ್ತೊಂದು ಗ್ಯಾಲಕ್ಸಿ ನೋಟ್-7

$
0
0
ಹೊತ್ತಿ ಉರೀತು ಮತ್ತೊಂದು ಗ್ಯಾಲಕ್ಸಿ ನೋಟ್-7

ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿದ್ದ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್-7 ಖರೀದಿಸಿದವರಿಗೆ ಮತ್ತೊಂದು ಆತಂಕದ ಸುದ್ದಿ ಇಲ್ಲಿದೆ.

ಈಗಾಗಲೇ ದೋಷಪೂರಿತ ಸೆಟ್ ಗಳನ್ನು ಕಂಪನಿ ವಾಪಸ್ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಇದೇ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್-7 ಬ್ಯಾಟರಿ ಸ್ಪೋಟಗೊಂಡ ಹಲವು ಪ್ರಕರಣ ವರದಿಯಾಗಿವೆ. ವಿಮಾನದಲ್ಲಿಯೂ ಈ ಸ್ಮಾರ್ಟ್ ಫೋನ್ ಬಳಕೆಯನ್ನು ನಿಷೇಧಿಸಲಾಗಿತ್ತು. ಇದೀಗ ಕೊರಿಯಾದಲ್ಲಿ ಮತ್ತೊಂದು ಗ್ಯಾಲಕ್ಸಿ ನೋಟ್-7 ಹೊತ್ತಿ ಉರಿದ ಘಟನೆ ವರದಿಯಾಗಿದೆ.

ಕೊರಿಯಾದ ಬರ್ಗರ್ ಕಿಂಗ್ ಸೆಂಟರ್ ನಲ್ಲಿ ಬರ್ಗರ್ ಸವಿಯುತ್ತಿದ್ದ ಗ್ರಾಹಕರೊಬ್ಬರ ಗ್ಯಾಲಕ್ಸಿ ನೋಟ್ 7 ಇದ್ದಕ್ಕಿದ್ದಂತೆ ಹೊತ್ತಿ ಉರಿದಿದೆ. ಬಳಿಕ ಅಲ್ಲಿದ್ದ ಸಿಬ್ಬಂದಿ ಅದನ್ನು ಹೊರಕ್ಕೆ ಹಾಕಿದ್ದಾರೆ. ದೋಷಪೂರಿತ ಗ್ಯಾಲಕ್ಸಿ ನೋಟ್ 7 ಬದಲಿಗೆ ನೀಡಿದ್ದ ಹ್ಯಾಂಡ್ ಸೆಟ್ ಗಳೂ ಸ್ಪೋಟಿಸಿರುವ ಪರಿಣಾಮ ಸ್ಯಾಮ್ಸಂಗ್ ಕಂಪನಿ ಈಗ ಈ ಸ್ಮಾರ್ಟ್ ಫೋನ್ ಗಳ ಉತ್ಪಾದನೆಯನ್ನೇ ಸ್ಥಗಿತಗೊಳಿಸಿದೆ.

 


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>