ರೆಬಲ್ ಸ್ಟಾರ್ ಅಂಬರೀಶ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ದೊಡ್ಮನೆ ಹುಡ್ಗ’ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಪುನೀತ್ ರಾಜ್ ಕುಮಾರ್ ಚಿತ್ರದ ಪ್ರಮೋಷನ್ ಗಾಗಿ ರಾಯಚೂರು, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬೆಳಿಗ್ಗೆ ಪುನೀತ್ ರಾಜ್ ಕುಮಾರ್ ಮಂತ್ರಾಲಯಕ್ಕೆ ತೆರಳಿ, ರಾಯರ ದರ್ಶನ ಪಡೆದುಕೊಂಡು ರಾಯಚೂರಿನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ‘ದೊಡ್ಮನೆ ಹುಡ್ಗ’ ಪ್ರದರ್ಶನ ಕಾಣುತ್ತಿರುವ ರಾಯಚೂರಿನ ಚಿತ್ರ ಮಂದಿರಕ್ಕೆ ಅವರು ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಅಭಿಮಾನಿಗಳು, ಪುನೀತ್ ಅವರನ್ನು ನೋಡಲು ಮುಗಿಬಿದ್ದಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಪಾಕ್ ಕಲಾವಿದರಿಗೆ ನಿಷೇಧ ಹೇರಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪುನೀತ್, ನಾವು ಮೊದಲು ಭಾರತೀಯರು. ನಂತರ ಕಲಾವಿದರು ಎಂದು ಹೇಳಿದ್ದಾರೆ.