ಮದುವೆಯ ಕ್ಷಣ ಸದಾ ನೆನಪಿನಲ್ಲಿರಲೆಂದು ಜನರು ಬಯಸ್ತಾರೆ. ನೀವೂ ನಿಮ್ಮ ಮದುವೆ ಬಗ್ಗೆ ಕನಸು ಕಾಣ್ತಾ ಇದ್ದರೆ ನಿಮಗೊಂದು ಗುಡ್ ನ್ಯೂಸ್. ಭಾರತೀಯ ರೈಲ್ವೆ ಇಲಾಖೆ ಮದುವೆಯಾಗುವವರಿಗೊಂದು ಒಳ್ಳೆಯ ಅವಕಾಶ ನೀಡ್ತಾ ಇದೆ. ವೆಡ್ಡಿಂಗ್ ಪ್ಯಾಕೇಜ್ ಶುರುಮಾಡಲು ಸಿದ್ಧತೆ ನಡೆಸಿದೆ.
ಮಹಾರಾಜಾ ಎಕ್ಸ್ಪ್ರೆಸ್ ನಿಮ್ಮ ಮದುವೆ ಕ್ಷಣ ನೆನಪಿನಲ್ಲಿರುವಂತೆ ಮಾಡಲಿದೆ. ಅದಕ್ಕಾಗಿ ನೀವು ಸಾಕಷ್ಟು ಹಣ ವ್ಯಯಮಾಡಬೇಕು. 5.5 ಕೋಟಿ ರೂ. ನಿಮ್ಮ ಕೈನಲ್ಲಿದ್ದರೆ ನೀವು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಬಹುದು. ಒಂದು ವಾರಗಳ ಕಾಲ ದೇಶ ಸುತ್ತುತ್ತ ಮದುವೆ ಖುಷಿ ಅನುಭವಿಸಬಹುದಾಗಿದೆ.
ರೈಲಿನಲ್ಲಿ ಮದುವೆ ಮಾಡಿಕೊಳ್ಳುವ ಜೊತೆಗೆ ಸಂಬಂಧಿಕರಿಗೆ ದೇಶ ನೋಡುವ ಅದ್ಭುತ ಅವಕಾಶ ನೀಡಬಯಸುವ ಶ್ರೀಮಂತರಿಗೆ ಐಆರ್ಸಿಟಿಸಿಯ ಈ ಯೋಜನೆ ಖುಷಿ ನೀಡಲಿದೆ. ವಧು-ವರ ಹಾಗೂ ಸಂಬಂಧಿಕರು ಮದುವೆಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ನೆರವಾಗುವಂತಹ ಸಾಕಷ್ಟು ಸೌಲಭ್ಯಗಳು ಈ ಯೋಜನೆಯಲ್ಲಿ ಸಿಗಲಿದೆ. ಕುಟುಂಬಸ್ಥರ ಬೇಡಿಕೆಗೆ ಅನುಗುಣವಾಗಿ ಪ್ಯಾಕೇಜ್ ಬೆಲೆ ಹಾಗೂ ಸೌಲಭ್ಯ ನಿರ್ಧಾರವಾಗಲಿದೆ.