ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ನ ಇ.ಡಿ.ಐ. ಕಟ್ಟಡದಲ್ಲಿ ಅವಿತಿರುವ, ಉಗ್ರರನೊಬ್ಬನನ್ನು ಸೇನೆ ಹತ್ಯೆ ಮಾಡಿದೆ.
ಉಗ್ರರನ್ನು ಸದೆ ಬಡಿಯಲು ಸೇನೆಯಿಂದ ಸತತವಾಗಿ ಕಾರ್ಯಾಚರಣೆ ನಡೆಸಲಾಗಿದ್ದು, ಕಟ್ಟಡದಲ್ಲಿ ಅವಿತಿರುವ ಉಗ್ರರು ಆಗಾಗ ಗ್ರೆನೇಡ್ ದಾಳಿ ನಡೆಸಿದ್ದಾರೆ. ಸೇನಾಪಡೆ ಯೋಧರು ಕಟ್ಟಡವನ್ನು ಸುತ್ತುವರೆದು, ಗುಂಡಿನ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಓರ್ವ ಉಗ್ರ ಹತನಾಗಿದ್ದಾನೆ. ಅವಿತಿರುವ ಉಳಿದ ಉಗ್ರರನ್ನು ಮಟ್ಟಹಾಕಲು ಕಾರ್ಯಾಚರಣೆ ಮುಂದುವರೆಸಲಾಗಿದೆ.
ಕಳೆದ 3 ದಿನಗಳಿಂದ ಉಗ್ರರು ಕಟ್ಟಡದಲ್ಲಿ ಅವಿತುಕೊಂಡಿದ್ದಾರೆ. ಅವರನ್ನು ಸದೆ ಬಡಿಯಲು ಸೇನಾ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.