ಅಮ್ಮನಾದ್ಮೇಲೂ ಸಾಕಷ್ಟು ಬಾಲಿವುಡ್ ಬೆಡಗಿಯರು ಬಣ್ಣ ಹಚ್ಚಿದ್ದಾರೆ. ಐಶ್ವರ್ಯ ರೈ ಬಚ್ಚನ್, ಶಿಲ್ಪಾ ಶೆಟ್ಟಿ ಟಾಪ್ ಹಿರೋಯಿನ್ ಪಟ್ಟಿಯಲ್ಲಿ ಈಗಲೂ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಇದೇ ಸಾಲಿಗೆ ಸೇರಿರುವ ರಾಣಿ ಮುಖರ್ಜಿ ಮತ್ತೆ ಬಾಲಿವುಡ್ ಗೆ ಬರ್ತಾಳಾ ಇಲ್ವಾ ಗೊತ್ತಿಲ್ಲ. ಆದ್ರೆ ಅಮ್ಮನಾದ್ಮೇಲೆ ಇದೇ ಮೊದಲ ಬಾರಿಗೆ ರಾಣಿ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾಳೆ.
ಮುಂಬೈನ ದುರ್ಗಾ ಪೆಂಡಾಲೊಂದಕ್ಕೆ ಭೇಟಿ ನೀಡಿದ್ದ ರಾಣಿ, ತಾಯಿ ದುರ್ಗೆಗೆ ಪೂಜೆ ಸಲ್ಲಿಸಿದ್ಲು. ದುರ್ಗಾ ಪೂಜೆ ನಂತ್ರ ಪೆಂಡಾಲ್ ನಲ್ಲಿಯೇ ಕುಳಿತ ರಾಣಿ ಮುಖರ್ಜಿ, ಅಲ್ಲಿಯೇ ಪ್ರಸಾದ ಸೇವಿಸಿದ್ಲು. ರಾಣಿ ಮುಖರ್ಜಿ ಹಿಂದಿನ ಡಿಸೆಂಬರ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಅಮ್ಮನಾದ್ಮೇಲೆ ರಾಣಿ ಒಮ್ಮೆ ಮಾತ್ರ ಕ್ಯಾಮರಾದಲ್ಲಿ ಸೆರೆಯಾಗಿದ್ಲು. ಆದ್ರೆ ಆಗ ರಾಣಿ ಲುಕ್ ನೋಡಿ ಅಭಿಮಾನಿಗಳು ತುಂಬಾ ಬೇಸರಗೊಂಡಿದ್ದರು. ರಾಣಿ ಸಿಕ್ಕಾಪಟ್ಟೆ ದಪ್ಪಗಾಗಿದ್ದೇ ಇದಕ್ಕೆ ಕಾರಣವಾಗಿತ್ತು.