ಬಿಡುಗಡೆಯಾಗಿ 26 ದಿನಗಳೊಳಗೆ 16 ಮಿಲಿಯನ್ ಗ್ರಾಹಕರನ್ನು ಸಂಪಾದಿಸುವ ಮೂಲಕ ರಿಲಯೆನ್ಸ್ ಜಿಯೋ ಹೊಸ ದಾಖಲೆಯನ್ನೇ ಬರೆದಿದೆ. ಟೆಲಿಕಾಂ ಇಂಡಸ್ಟ್ರಿಯ ರೂಪುರೇಷೆ ಮತ್ತು ಬೆಲೆಯನ್ನೆಲ್ಲ ಜಿಯೋ ಬದಲಾಯಿಸಿದೆ.
ಆದ್ರೆ ಜಿಯೋ ಸಿಮ್ ಪಡೆಯಲು ಧಾವಿಸುವವರೆಲ್ಲ ಫ್ರೀ ಆಫರ್ ಮುಗಿದ್ಮೇಲೆ ಏನು ಅಂತಾ ಒಮ್ಮೆ ಯೋಚನೆ ಮಾಡ್ತಿದ್ದಾರೆ. ಅದೇನೇ ಆದ್ರೂ ಜಿಯೋ ಕೊಡುಗೆಯಿಂದ ಏರ್ಟೆಲ್ ಮತ್ತು ವೊಡಾಫೋನ್ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ.
ಹಾಗಾಗಿ ಜಿಯೋ ಜೊತೆಗೆ ಪೈಪೋಟಿಗಿಳಿಯಲು ಏರ್ಟೆಲ್ ಹಾಗೂ ವೊಡಾಫೋನ್ ಕೂಡ ಭರ್ಜರಿ ಆಫರ್ ನೀಡುತ್ತಿವೆ. 25 ರೂಪಾಯಿಗೆ 1 ಜಿಬಿ ಡಾಟಾ ನೀಡುವ ಹೊಸ ಪ್ಲಾನ್ ಲಾಂಚ್ ಮಾಡಿವೆ. ಅವರ ಹೊಸ 4ಜಿ ಫೋನ್ ಕೊಂಡುಕೊಂಡ್ರೆ 9 ಜಿಬಿ ಡೇಟಾ ಉಚಿತ. ಬಳಿಕ 1 ಜಿಬಿ 4ಜಿ ಡೇಟಾಗೆ 250 ರೂಪಾಯಿ. ಈಗಾಗ್ಲೇ 4ಜಿ ಮೊಬೈಲ್ ಇರುವವರಿಗೂ ಭರ್ಜರಿ ಆಫರ್ ಇದೆ. ವೊಡಾಫೋನ್ 699 ರೂ. ಪ್ಲಾನ್ ನಲ್ಲಿ 1000 ನಿಮಿಷಗಳ ಟಾಕ್ ಟೈಮ್, 500 ಎಸ್ ಎಂ ಎಸ್ ಹಾಗೂ 4ಜಿಬಿ ಡೇಟಾ ನೀಡುತ್ತಿದೆ. ಈ ಮೊದಲು ಇದೇ ಪ್ಲಾನ್ ನಲ್ಲಿ ಕೇವಲ 2 ಜಿಬಿ ಡೇಟಾ ನೀಡಲಾಗುತ್ತಿತ್ತು. ಆದ್ರೆ ಇದು ಜಿಯೋ 499 ರೂ. ಪ್ಲಾನ್ ಗಿಂತ ದುಬಾರಿ.