ಮೂಲತಃ ಗುಜರಾತಿಗಳ ಸಂಪ್ರದಾಯವಾಗಿದ್ದ ಗಾರ್ಬಾ ನೃತ್ಯ ಈಗ ದೇಶದ ಇತರೆ ಕಡೆಯೂ ವ್ಯಾಪಿಸಿದೆ. ವಾಣಿಜ್ಯ ನಗರಿ ಮುಂಬೈನಲ್ಲೂ ನವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.
ಇತ್ತೀಚೆಗೆ ಮುಂಬೈ ಲೋಕಲ್ ಟ್ರೈನ್ ನಲ್ಲಿ ಲೇಡಿಸ್ ಕಂಪಾರ್ಟ್ಮೆಂಟ್ ನಲ್ಲಿದ್ದ ಮಹಿಳೆಯರು ಗಾರ್ಬಾ ತಾಳಕ್ಕೆ ಹೆಜ್ಜೆ ಹಾಕಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆನೇಕರು ವೀಕ್ಷಿಸಿ ಶೇರ್ ಮಾಡಿದ್ದಾರೆ.