ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ನಲ್ಲಿ, ಉಗ್ರರು ಮತ್ತು ಸೇನೆಯ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.
ಪಾಂಪೋರ್ ನ ಇ.ಡಿ.ಐ. ಹಾಸ್ಟೆಲ್ ಬಹುಮಟ್ಟಡಿ ಕಟ್ಟಡದಲ್ಲಿ ಅವಿತಿರುವ ಉಗ್ರರು ತಡರಾತ್ರಿ, 12 ಗಂಟೆ ಮತ್ತು 2 ಗಂಟೆ ಸುಮಾರಿಗೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಸೇನೆಯಿಂದಲೂ ಫೈರಿಂಗ್ ಮಾಡಲಾಗಿದ್ದು, ಕಟ್ಟಡದಿಂದ ಹೊರ ಹೋಗುವ ಉಗ್ರರ ಯತ್ನವನ್ನು ವಿಫಲಗೊಳಿಸಲಾಗಿದೆ. ಸದ್ಯ ಉಗ್ರರು ಒಂದೇ ಕೊಠಡಿಯಲ್ಲಿದ್ದು, ಕಟ್ಟಡದೊಳಗೆ ಕಮಾಂಡೊಗಳನ್ನು ಕಳಿಸಲು ಸೇನೆ ಚಿಂತಿಸಿದೆ.
ಸಾಧ್ಯವಾದರೆ ಇಡೀ ಕಟ್ಟಡವನ್ನು ಬೀಳಿಸುವ ಚಿಂತನೆಯೂ ಇದೆ ಎನ್ನಲಾಗಿದ್ದು, ಉಗ್ರರ ಸದೆ ಬಡಿಯಲು ಸೇನೆ ಕಾರ್ಯಾಚರಣೆ ಮುಂದುವರೆಸಲಾಗಿದೆ.