ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
406 ನೇ ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ವೈಭವದ ಜಂಬೂಸವಾರಿ ಮೆರವಣಿಗೆ ಮಧ್ಯಾಹ್ನ 2.16 ಕ್ಕೆ ಆರಂಭವಾಗಲಿದೆ. ವೈಭವದ ಮೆರವಣಿಗೆಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಪ್ರವಾಸಿಗರು, ಸ್ಥಳೀಯರು ರೆಡಿಯಾಗಿದ್ದಾರೆ. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆಯ ವಿಗ್ರಹದ ಮೆರವಣಿಗೆ ನಡೆಯಲಿದೆ.
ಅಂಬಾರಿಯನ್ನು ಹೊರಲಿರುವ ಅರ್ಜುನ ಸೇರಿದಂತೆ ಮೆರವಣಿಗೆಯಲ್ಲಿ ಸಾಗುವ ಆನೆಗಳನ್ನು ಸಿಂಗರಿಸಲಾಗಿದೆ. ಅರ್ಜುನ ಆನೆ 5 ನೇ ಬಾರಿಗೆ ಅಂಬಾರಿ ಹೊರುತ್ತಿದೆ. ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳು, ಕಲಾತಂಡಗಳು ಮೆರುಗು ನೀಡಲಿವೆ.