‘ಬಿಗ್ ಬಾಸ್’ ಸೀಸನ್ 4 ರಲ್ಲಿ ಭಾಗವಹಿಸಿರುವ ಕಿರಿಕ್ ಕೀರ್ತಿ ಹೆಸರಿಗಷ್ಟೇ ಕಿರಿಕ್. ಅವರಿಗಿಂತಲೂ ಜಾಸ್ತಿ ಕಿರಿಕ್ ಪ್ರಥಮ್ ಅವರಿಂದಾಗುತ್ತಿದೆ.
ಮನೆಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಬ್ಯಾಂಡ್ ಕೊಡುವುದರಿಂದ ಆರಂಭವಾದ ಪ್ರಥಮ್ ಅವರ ಕಿರಿಕ್, ಮೊದಲ ದಿನ ಜೋರಾಗಿತ್ತು. ಪ್ರಥಮ್ ಕಿರಿಕ್ ನಿಂದಾಗಿಯೇ ಅನೇಕರು ಏರಿದ ಧ್ವನಿಯಲ್ಲಿ ಜಗಳವಾಡಿದ್ದಾರೆ. ನಿರಂಜನ್ ದೇಶಪಾಂಡೆ, ಕೀರ್ತಿ ಅವರೊಂದಿಗೆ ಪ್ರಥಮ್ ಏರು ಧ್ವನಿಯಲ್ಲೇ ವಾದ ಮಾಡಿದ್ದಾರೆ. ಬೇರೆ ಸದಸ್ಯರು ಅವರನ್ನು ಸಮಾಧಾನಪಡಿಸಲು ಮುಂದಾದರೂ ಪ್ರಥಮ್ ಕೇಳದೇ ತಮ್ಮ ಮೊಂಡು ವಾದವನ್ನೇ ಮುಂದುವರೆಸಿದ್ದಾರೆ.
ಮೊದಲ ದಿನದಲ್ಲೇ ಪ್ರಥಮ್ ಕಿರಿಕ್ ಜೋರಾಗಿದೆ. ಶಾಲಿನಿ ಮೊದಲಾದವರು ಸಮಾಧಾನ ಮಾಡಲು ಮುಂದಾದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಅವರಿರಲಿಲ್ಲ. ನಾಮಿನೇಷನ್ ಮಾಡುವಾಗಲೂ ಹೆಚ್ಚಿನ ಸದಸ್ಯರು ಪ್ರಥಮ್ ಹೆಸರನ್ನೇ ಹೇಳಿದ್ದಾರೆ.