ಹರ್ಯಾಣದ ಪ್ರೇಮನಗರದಲ್ಲಿ ನಂಬಲಸಾಧ್ಯವಾದಂತಹ ಘಟನೆ ನಡೆದಿದೆ. ನವ ವಿವಾಹಿತೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಅತ್ತೆಯ ಹತ್ಯೆ ಮಾಡಿದ್ದಾಳೆ. ಮೊಬೈಲ್ ನಲ್ಲಿ ಮಾತನಾಡಲು ಅತ್ತೆ ಬಿಡ್ತಿಲ್ಲ ಎನ್ನುವ ಕಾರಣಕ್ಕೆ ಅತ್ತೆಯನ್ನು ಹತ್ಯೆ ಮಾಡಿದ ಸೊಸೆ, ಈಗ ಕಂಬಿ ಎಣಿಸ್ತಿದ್ದಾಳೆ.
ಅತ್ತೆಯನ್ನು ಹತ್ಯೆ ಮಾಡಿದ ಸುರೇಖಾ ದರೋಡೆಕೋರರು ಈ ಕೃತ್ಯವೆಸಗಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಒಂದು ಸುಳ್ಳಿನ ಕಥೆ ಹೇಳಿದ್ದಾಳೆ. ಆದ್ರೆ ಅನುಮಾನಗೊಂಡ ಪೊಲೀಸರು ಬೆದರಿಸಿದಾಗ ಸುರೇಖಾ ಸತ್ಯ ಒಪ್ಪಿಕೊಂಡಿದ್ದಾಳೆ.
ನಾಲ್ಕು ತಿಂಗಳ ಹಿಂದಷ್ಟೇ ಸುರೇಖಾ ಮದುವೆ ನಡೆದಿತ್ತು. ಸುರೇಖಾ ಫೋನನ್ನು ತನ್ನ ಬಳಿ ಇಟ್ಟುಕೊಂಡಿದ್ದ ಅತ್ತೆ, ಸದಾ ಸುರೇಖಾಗೆ ಹಿಡಿಶಾಪ ಹಾಕುತ್ತಿದ್ದಳಂತೆ. ಯಾರ ಜೊತೆಯೂ ಮಾತನಾಡಲು ಕೊಡುತ್ತಿರಲಿಲ್ಲವಂತೆ. ಇದರಿಂದ ಬೇಸರಗೊಂಡಿದ್ದ ಸುರೇಖಾ ಅತ್ತೆಯನ್ನೇ ಹತ್ಯೆ ಮಾಡಿದ್ದಾಳೆ.