ಇಂದೋರ್ ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲ್ಯಾಂಡ್ ಮೂರನೇ ಟೆಸ್ಟ್ ನಲ್ಲಿ ಕೊಹ್ಲಿ ಇತಿಹಾಸ ರಚಿಸಿದ್ದಾರೆ. ಹೋಲ್ಕರ್ ಮೈದಾನದಲ್ಲಿ ಕೊಹ್ಲಿ ಅಬ್ಬರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು ಬಾರಿ ದ್ವಿಶತಕ ಬಾರಿಸಿದ ಮೊಟ್ಟ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎರಡನೇ ದಿನ ಕೊಹ್ಲಿ 366 ಎಸೆತಗಳಲ್ಲಿ 18 ಬೌಂಡರಿ ಬಾರಿಸಿ ದ್ವಿಶತಕ ಪೂರ್ಣಗೊಳಿಸಿದ್ದಾರೆ. ಇಂದೋರ್ ಟೆಸ್ಟ್ ನ ಮೊದಲ ದಿನ ಕೊಹ್ಲಿ 103 ರನ್ ಗಳಿಸಿ ಆಟ ಮುಗಿಸಿದ್ದರು. ಇಂದು ದಿನದಾಟ ಆರಂಭವಾಗ್ತಿದ್ದಂತೆ ನ್ಯೂಜಿಲ್ಯಾಂಡ್ ಬೌಲರ್ ಗಳ ಬೆವರಿಳಿಸಿದ ಕೊಹ್ಲಿ ದ್ವಿಶತಕ ಬಾರಿಸಿದ್ರು. ಇನ್ನು ಇಂದೋರ್ ನಲ್ಲಿ ಅಜಿಂಕ್ಯಾ ರಹಾನೆ ಕೂಡ ಅಬ್ಬರಿಸಿದ್ದಾರೆ. 381 ಬಾಲಿಗೆ 188 ರನ್ ಗಳಿಸಿ ಆಟ ಮುಗಿಸಿದ್ದಾರೆ.
ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ತಮ್ಮ ಮೊದಲ ದ್ವಿಶತಕ ಸಿಡಿಸಿದ್ದರು. 281 ಬಾಲ್ ಗೆ 200 ರನ್ ಗಳಿಸಿದ್ದರು..