ಮನೆಯಲ್ಲಿ ಶೌಚಾಲಯ ಕಟ್ಟಿಸುವಂತೆ ವ್ಯಕ್ತಿಯೊಬ್ಬನನ್ನು ಥಳಿಸಿದ ಒಂದೇ ಕುಟುಂಬದ ಹದಿನಾಲ್ಕು ಮಂದಿ ಆತನನ್ನು ಕೊಂದು ಹಾಕಿದ್ದಾರೆ.
ಛತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯ ಮಹಾರಾಜ್ಪುರ ಗ್ರಾಮದಲ್ಲಿ ಎಲ್ಲರೂ ನವರಾತ್ರಿಯ ಜಗ್ರಾತಾ ಸಂಭ್ರಮದಲ್ಲಿದ್ರು. ಒಂದೇ ಕುಟುಂಬದ 14 ಮಂದಿ ವಿಪಿನ್ ಎಂಬಾತನ ಮನೆಗೆ ನುಗ್ಗಿ ಆತನನ್ನು ಹೊರಕ್ಕೆಳೆದುಕೊಂಡು ಬಂದು ಥಳಿಸಿದ್ದಾರೆ.
ಗ್ರಾಮಸ್ಥರ ಎದುರಲ್ಲೇ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಪ್ರತಿಯೊಬ್ಬರೂ ಶೌಚಾಲಯ ಕಟ್ಟಲೇಬೇಕೆಂದು ಪಂಚಾಯ್ತಿಯಲ್ಲಿ ನಿರ್ಣಯವಾಗಿತ್ತು. ಹಣಕಾಸಿನ ತೊಂದರೆಯಿದ್ದಿದ್ದರಿಂದ ಟಾಯ್ಲೆಟ್ ಕಟ್ಟಿಸಿಕೊಳ್ಳಲು ವಿಪಿನ್ ಗೆ ದೀಪಾವಳಿವರೆಗೂ ಸಮಯ ನೀಡಲಾಗಿತ್ತು.
ಆದ್ರೆ ರಮಾನಿಕ್ ಸಾಹು ಎಂಬಾತ ಗ್ರಾಮಸ್ಥರ ಎದುರು ವಿಪಿನ್ ನನ್ನು ನಿಂದಿಸಿದ್ದ. ಇದ್ರಿಂದ ನೊಂದಿದ್ದ ವಿಪಿನ್ ಕುಡಿದ ಅಮಲಿನಲ್ಲಿ ರಮಾನಿಕ್ ಸಾಹು ಕುಟುಂಬದವರಿಗೆ ಬೆದರಿಸುತ್ತಿದ್ದ. ಅಕ್ಟೋಬರ್ 3 ರಂದು ವಿಪಿನ್ ಹಾಗೂ ಸಾಹು ಕುಟುಂಬದವರ ಮಧ್ಯೆ ಜಗಳವಾಗಿತ್ತು. ಅವರು ಗ್ರಾಮಸ್ಥರೆದುರೇ ವಿಪಿನ್ ನನ್ನು ಕೊಲ್ಲಲು ಪ್ಲಾನ್ ಹಾಕಿಕೊಂಡಿದ್ರು. ಹಂತಕರಲ್ಲಿ 6 ಮಹಿಳೆಯರು ಕೂಡ ಸೇರಿದ್ದಾರೆ. ಆತ ನಮಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸುವ ಮೂಲಕ ಪ್ರಕರಣವನ್ನು ತಿರುಚುವ ಪ್ರಯತ್ನ ಕೂಡ ನಡೆದಿದೆ. ಎಲ್ಲ 14 ಕೊಲೆ ಆರೋಪಿಗಳನ್ನೂ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.