ಹೈಟಿ: ಭೀಕರ ಮ್ಯಾಥ್ಯೂ ಚಂಡಮಾರುತದ ಅಬ್ಬರಕ್ಕೆ ಪುಟ್ಟ ರಾಷ್ಟ್ರ ಹೈಟಿ ಸಂಪೂರ್ಣ ನಲುಗಿ ಹೋಗಿದೆ. ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.
ಮ್ಯಾಥ್ಯೂ ಚಂಡಮಾರುತದ ರುದ್ರ ನರ್ತನಕ್ಕೆ ಸಾವನ್ನಪ್ಪಿದವರ ಸಂಖ್ಯೆ 1,000 ದ ಗಡಿ ದಾಟಿದೆ. ವಸತಿ, ಆಹಾರ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿರುವ ಅಪಾರ ಸಂಖ್ಯೆಯ ಜನ ನಿರ್ಗತಿಕರಾಗಿದ್ದಾರೆ. ವಿದ್ಯುತ್, ಸಾರಿಗೆ, ಫೋನ್ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯ ಕೈಗೊಳ್ಳಲು ಅಡ್ಡಿಯಾಗಿದೆ. ಮಳೆ ನೀರಿನಿಂದ ಪ್ರವಾಹ ಉಂಟಾಗಿ ಭಾರೀ ತೊಂದರೆಯಾಗಿದೆ.
ಚಂಡಮಾರುತದ ಅಬ್ಬರಕ್ಕೆ ಹೈಟಿ ಜನ ಕಂಗಾಲಾಗಿದ್ದಾರೆ. ಹೈಟಿಯನ್ನು ಹಾಳು ಮಾಡಿದ ಮ್ಯಾಥ್ಯೂ, ಅಮೆರಿಕದ ಫ್ಲೋರಿಡಾದ ಕರಾವಳಿಗೆ ತಲುಪಿದೆ. ಸಮುದ್ರದ ಅಲೆಗಳು ಮುಗಿಲೆತ್ತರಕ್ಕೆ ಏರಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಭಾರೀ ಗಾಳಿ, ಮಳೆಯಿಂದಾಗಿ ಜನ ಹೈರಾಣಾಗಿದ್ದಾರೆ.