ರೈಲ್ವೆ ಪ್ರಯಾಣಿಕರಿಗೊಂದು ಖುಷಿ ಸುದ್ದಿ. ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಶುರು ಮಾಡಿರುವ ರೈಲ್ವೆ ಆಪ್ ನಲ್ಲಿ ಸಾಕಷ್ಟು ಬದಲಾವಣೆ ತರಲು ಮುಂದಾಗಿದೆ. ಆಪ್ ಮೂಲಕ ಪ್ರಯಾಣಿಕರು ಅನೇಕ ಸೇವೆಗಳನ್ನು ಕುಳಿತಲ್ಲಿಯೇ ಪಡೆಯಬಹುದಾಗಿದೆ.
ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಂದ ಹಿಡಿದು ಟ್ಯಾಕ್ಸಿ ಬುಕ್ಕಿಂಗ್ ವರೆಗೆ ಎಲ್ಲ ಸೇವೆಗಳನ್ನು ಆಪ್ ಮೂಲಕ ಪಡೆಯಬಹುದಾಗಿದೆ. ಮುಂಗಡ ಆಹಾರವನ್ನು ಈ ಆಪ್ ಮೂಲಕ ಆರ್ಡರ್ ಮಾಡಬಹುದಾಗಿದೆ. ಹಮಾಲಿ ಸೇವೆಯನ್ನು ಪಡೆಯಬಹುದಾಗಿದೆ. ವಿಶ್ರಾಂತಿ ಕೊಠಡಿ, ಹಾಸಿಗೆ ವಸ್ತ್ರಗಳನ್ನು ಕೂಡ ಆಪ್ ಮೂಲಕವೇ ಬುಕ್ ಮಾಡಬಹುದಾಗಿದೆ. ಹೊಟೇಲ್ ಕೋಣೆಯನ್ನು ಆಪ್ ಮೂಲಕ ಕಾಯ್ದಿರಿಸಬಹುದಾಗಿದೆ. ರೈಲಿನಲ್ಲಿ ಸ್ವಚ್ಛತೆ ಇಲ್ಲವಾದಲ್ಲಿ ಅದ್ರ ಬಗ್ಗೆ ಆಪ್ ಮೂಲಕವೇ ದೂರು ನೀಡಬಹುದಾಗಿದೆ.
ಈ ಅಪ್ಲಿಕೇಷನ್ ಮೂರು ಹಂತದಲ್ಲಿರುತ್ತದೆ. ಮೂರನೇ ವಿಭಾಗದಲ್ಲಿ ವೈದ್ಯಕೀಯ ಸೌಲಭ್ಯ ಹಾಗೂ ಪೊಲೀಸ್ ಸೇವೆ ಲಭ್ಯವಾಗಲಿದೆ. ತುರ್ತು ಸಂದರ್ಭದಲ್ಲಿ ಪೊಲೀಸ್ ಸೇವೆಯನ್ನು ಪ್ರಯಾಣಿಕರು ಪಡೆಯಬಹುದಾಗಿದೆ. ಇದರಿಂದ ರೈಲ್ವೆ ಇಲಾಖೆಗೆ ಸಾಕಷ್ಟು ಲಾಭವಿದೆ. ವಾರ್ಷಿಕ 500 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ.