ಒಂದಾದ ಮೇಲೆ ಒಂದು ಆಫರ್ ನೀಡಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಟೆಲಿಕಾಂ ಕಂಪನಿಗಳು ಮುಂದಾಗಿವೆ. ಇದ್ರಲ್ಲಿ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ಹಿಂದೆ ಬಿದ್ದಿಲ್ಲ. ಗುಜರಾತ್ ನಲ್ಲಿ ಭರ್ಜರಿ ಆಫರ್ ನೊಂದಿಗೆ 4ಜಿ ಸೇವೆಯನ್ನು ಏರ್ಟೆಲ್ ಶುರು ಮಾಡಿದೆ.
1 ಜಿಬಿ ಡೇಟಾ ಪ್ಯಾಕ್ ಪಡೆದ ಏರ್ಟೆಲ್ ಗ್ರಾಹಕರಿಗೆ 9 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. 1 ಜಿಬಿ ಡೇಟಾ ಪ್ಯಾಕ್ ಗೆ ಗ್ರಾಹಕ 249 ರೂಪಾಯಿ ನೀಡಬೇಕು. 1 ಜಿಬಿ ಡೇಟಾ ಪ್ಯಾಕ್ ಪಡೆದ ನಂತ್ರ 4 ಜಿಬಿ ಆಫರ್ ಎಂದು ಟೈಪ್ ಮಾಡಿ 52141 ಕ್ಕೆ ಮೆಸ್ಸೇಜ್ ಮಾಡಬೇಕು. ಹೀಗೆ ಮಾಡಿದ್ರೆ ಗ್ರಾಹಕರಿಗೆ 10 ಜಿಬಿ ಡಾಟಾ ಉಚಿತವಾಗಿ ಸಿಗಲಿದೆ.
ಹಿಂದಿನ ತಿಂಗಳು ಪೋಸ್ಟ್ ಪೇಯ್ಡ್ ಹಾಗೂ ಪ್ರೀ ಪೇಯ್ಡ್ ಗ್ರಾಹಕರಿಗಾಗಿ 1499 ರೂಪಾಯಿಯ ಆಫರ್ ನೀಡಿತ್ತು. ಈ ಆಫರ್ ನಲ್ಲಿ ಗ್ರಾಹಕರಿಗೆ 6 ಜಿಬಿ ಡೇಟಾ ಸಿಗ್ತಾ ಇದೆ. ಈ ಡೇಟಾ ಖಾಲಿಯಾದ ನಂತ್ರ 51 ರೂಪಾಯಿ ತುಂಬಿದ್ರೆ 1 ಜಿಬಿ ಡೇಟಾ ಸಿಗಲಿದೆ.