ಸ್ನೇಹಿತನ ಬಳಿ 5 ಸಾವಿರ ರೂ. ಸಾಲ ಪಡೆದಿದ್ದ ವ್ಯಕ್ತಿಯೊಬ್ಬ ಅದನ್ನು ತೀರಿಸಲು ಹೀನ ಮಾರ್ಗ ಹಿಡಿದಿದ್ದಾನೆ. ಸ್ನೇಹಿತನನ್ನು ಮನೆಗೆ ಕರೆ ತಂದು ಪತ್ನಿ ಮೇಲೆ ಅತ್ಯಾಚಾರವಸೆಗಲು ಬಿಡುವ ಮೂಲಕ ತನ್ನ ಸಾಲ ಚುಕ್ತಾ ಮಾಡಿಕೊಂಡಿದ್ದಾನೆ.
ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದ್ದು, ನರೇಶ್ ಎಂಬಾತ ತನ್ನ ಸ್ನೇಹಿತ ಪಿಂಟು ಬಳಿ 5 ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಸಾಲ ತೀರಿಸುವಂತೆ ಪಿಂಟು ಒತ್ತಾಯ ಹೆಚ್ಚಾದ ಹಿನ್ನಲೆಯಲ್ಲಿ ಅದನ್ನು ತೀರಿಸಲು ನರೇಶ್ ಅಡ್ಡ ಹಾದಿ ಹಿಡಿದಿದ್ದಾನೆ.
ಸೆಪ್ಟೆಂಬರ್ 29 ರಂದು ಸ್ನೇಹಿತ ಪಿಂಟುನನ್ನು ಮನೆಗೆ ಕರೆದುಕೊಂಡು ಬಂದ ನರೇಶ್, ಆತನ ಜೊತೆ ಸಹಕರಿಸುವಂತೆ ಪತ್ನಿಗೆ ತಾಕೀತು ಮಾಡಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ ವೇಳೆ ಹಲ್ಲೆ ಮಾಡಿರುವುದಲ್ಲದೇ ಪತ್ನಿ ಮೇಲೆ ಪಿಂಟು ಅತ್ಯಾಚಾರವೆಸಗಲು ಕುಮ್ಮಕ್ಕು ನೀಡಿದ್ದಾನೆ. ಅಕ್ಟೋಬರ್ 1 ರಂದು ನರೇಶನ ಪತ್ನಿ ಗಾಜಿಯಾಬಾದ್ ಲೋನಿ ಬಾರ್ಡರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನರೇಶ್ ಹಾಗೂ ಪಿಂಟುರನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.