ದುರ್ಗಾ ಪೂಜೆಯಲ್ಲಿ ಭಕ್ತರು ನಿರತರಾಗಿದ್ದಾರೆ. ಬಾಲಿವುಡ್ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ನಟಿ ಕಾಜೋಲ್, ದೇವಿಯ ಭಕ್ತೆ. ನವರಾತ್ರಿಯನ್ನು ವಿಶೇಷವಾಗಿ ಆಚರಿಸ್ತಾಳೆ ಕಾಜೋಲ್. ಎಲ್ಲೆ ಇದ್ರೂ ನವರಾತ್ರಿಯ ಸಂದರ್ಭದಲ್ಲಿ ಮುಂಬೈನ ತನ್ನ ನಿವಾಸಕ್ಕೆ ಬರ್ತಾಳೆ ಕಾಜೋಲ್. ಅಲ್ಲಿ ತಾಯಿ ದುರ್ಗೆಯ ಆರಾಧನೆ ಶುರು ಮಾಡ್ತಾಳೆ.
ನವರಾತ್ರಿ ಶುರುವಾಗ್ತಿದ್ದಂತೆ ನಟಿ ಕಾಜೋಲ್ ಉತ್ತರ ಮುಂಬೈನಲ್ಲಿ ಸ್ಥಾಪಿಸಲಾಗಿರುವ ಸಾರ್ವಜನಿಕ ದುರ್ಗೆಯ ದರ್ಶನ ಪಡೀತಾಳೆ. ಈ ಬಾರಿ ಕೂಡ ಅಲ್ಲಿಗೆ ಬಂದು ಭಕ್ತಿ- ಭಾವದಿಂದ ಪೂಜೆ ಸಲ್ಲಿಸಿದ್ದಾಳೆ. ಕಾಜೋಲ್ ಜೊತೆ ನಟಿ ಶರ್ಬಾನಿ ಮುಖರ್ಜಿ ಹಾಗೂ ಪಪ್ಪು ಲಹರಿ ಮಗ ಬಪ್ಪ ಕೂಡ ಸಾರ್ವಜನಿಕ ದೇವಿಯ ದರ್ಶನ ಪಡೆದ್ರು.
ಕಾಜೋಲ್ ಹೋಮ್ ಪ್ರೊಡೆಕ್ಷನ್ ನಲ್ಲಿ ‘ಶಿವಾಯ್’ ರಿಲೀಸ್ ಗೆ ಸಿದ್ಧವಾಗಿದೆ. ಇದೇ ದೀಪಾವಳಿಗೆ ‘ಶಿವಾಯ್’ ತೆರೆಗೆ ಬರ್ತಾ ಇದೆ. ಅದ್ರ ಪ್ರಮೋಷನ್ ನಲ್ಲಿ ಕಾಜೋಲ್ ಬ್ಯುಸಿಯಿದ್ದಾಳೆ. ಸದ್ಯ ಕಾಜೋಲ್ ಹಾಗೂ ಅಜಯ್ ಅಮೆರಿಕಾಕ್ಕೆ ಹೋಗಿ ಬಂದಿದ್ದಾರೆ.