ಆನ್ಲೈನ್ ಶಾಪಿಂಗ್ ಕಂಪನಿಗಳಿಗೆ ಟಕ್ಕರ್ ನೀಡಲು ಸಾಮಾಜಿಕ ಜಾಲತಾಣ ಫೇಸ್ಬುಕ್ ಮುಂದಾಗಿದೆ. ಆನ್ಲೈನ್ ಮಾರ್ಕೆಟ್ ಪ್ಲೇಸ್ ಶುರುಮಾಡಿದೆ. ಇದ್ರಲ್ಲಿ ಬಳಕೆದಾರರು ವಸ್ತುಗಳನ್ನು ಖರೀದಿಸಬಹುದು ಹಾಗೇ ಮಾರಾಟ ಮಾಡಬಹುದಾಗಿದೆ.
ಫೇಸ್ಬುಕ್ ಬಳಕೆದಾರರು ವರ್ಷಗಳ ಹಿಂದೆಯೇ ಈ ಖರೀದಿ ಮಾರಾಟ ಶುರು ಮಾಡಿದ್ದಾರೆ. ಆದ್ರೀಗ ಇದಕ್ಕೆ ಔಪಚಾರಿಕ ರೂಪ ನೀಡಲಾಗಿದೆ ಎಂದು ಫೇಸ್ಬುಕ್ ಹೇಳಿದೆ. ನಿಧಾನವಾಗಿ ಆರಂಭವಾದ ಈ ಚಟುವಟಿಕೆ ಕ್ರಮೇಣ ವೇಗ ಪಡೆದುಕೊಂಡಿದೆ. ಈ ತಿಂಗಳು 45 ಕೋಟಿ ಜನರು ಖರೀದಿ ಹಾಗೂ ಮಾರಾಟ ಗುಂಪಿಗೆ ಭೇಟಿ ನೀಡಿದ್ದಾರೆ ಎಂದು ಪ್ರಾಡಕ್ಟ್ ಮ್ಯಾನೇಜರ್ ಕೆರ್ರಿ ಕೂ ಹೇಳಿದ್ದಾರೆ.
ಮಾರ್ಕೆಟ್ ಪ್ಲೇಸ್ ಐಕಾನ್ ಮೇಲೆ ಕ್ಲಿಕ್ ಮಾಡಿದ್ರೆ ಮಾರಾಕ್ಕಿಟ್ಟಿರುವ ವಸ್ತುಗಳ ವಿವರ ಸಿಗಲಿದೆ. ಹಾಗೆ ನಮ್ಮ ವಸ್ತುಗಳನ್ನು ಫೋಟೋ ತೆಗೆದು ಮಾರಾಟ ಕೂಡ ಮಾಡಬಹುದಾಗಿದೆ. ಬಳಕೆದಾರರಿಗೆ ಅವಶ್ಯವಿರುವ ವಸ್ತುಗಳು ಹಾಗೂ ಅವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಕೆಟ್ ಪ್ಲೇಸ್ ಶುರುಮಾಡಲಾಗಿದೆ.