ಮಧ್ಯಪ್ರದೇಶದ ಜಬಲ್ಪುರದ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎನ್ ಪಿ ದುಬೇ ಎಂಎಂಎಸ್ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ.
ದುಬೇ ತನಗಿಂತ 60 ವರ್ಷ ಚಿಕ್ಕ ಹುಡುಗಿ ಜೊತೆಗಿರುವ 39 ಸೆಕೆಂಡ್ ಗಳ ವಿಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ನಾಯಕ ಕೆಂಪು ಬಣ್ಣದ ಲುಂಗಿಯಲ್ಲಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣ್ತಿದೆ.
ಗೋರಕ್ಪುರದಲ್ಲಿರುವ ದುಬೇ ನಿವಾಸದಲ್ಲಿ ಈ ವಿಡಿಯೋ ಶೂಟ್ ಮಾಡಲಾಗಿದೆ. ಮನೆಯೊಳಗೆ ಹೋಗುವ ಕ್ಯಾಮರಾಮೆನ್ ಹುಡುಗಿ ಜೊತೆ ಮಾತನಾಡಿದ್ದಾನೆ. ಸಣ್ಣ ಕೆಲಸ ಇತ್ತು, ಹಾಗಾಗಿ ಬಂದಿದ್ದೆ ಎನ್ನುತ್ತಾಳೆ ಹುಡುಗಿ. ಆದ್ರೆ ಮಧ್ಯ ಪ್ರವೇಶ ಮಾಡುವ ದುಬೇ, ಕ್ಯಾಮರಾ ಕಿತ್ತೆಸೆಯುತ್ತಾರೆ.
ವಿಡಿಯೋದಲ್ಲಿ ದುಬೇ ಮುಖ ಸ್ಪಷ್ಟವಾಗಿ ಕಾಣ್ತಾ ಇದೆ. ವಿಡಿಯೋ ನೋಡಿರುವ ಕಾಂಗ್ರೆಸ್ ನಾಯಕರು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 1980-81 ರಲ್ಲಿ ದುಬೇ, ಜಬಲ್ಪುರ ಪುರಸಭೆ ಮೇಯರ್ ಆಗಿದ್ದರು. ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿರುವ ದುಬೇ ವಕೀಲ ಕೂಡ ಹೌದು.