ಐಫೋನ್ 6 ಪ್ಲಸ್ ಕೊಂಡುಕೊಂಡಿರುವ ಗ್ರಾಹಕರಿಗೆಲ್ಲ ಶಾಕಿಂಗ್ ನ್ಯೂಸ್ ಇದೆ. ಬರ್ಲಿಂಗ್ಟನ್ ನಲ್ಲಿ ವಿದ್ಯಾರ್ಥಿಯೊಬ್ಬನ ಜೇಬಿನಲ್ಲೇ ಐಫೋನ್ 6 ಪ್ಲಸ್ ಸ್ಫೋಟಗೊಂಡಿದೆ.
ವಿದ್ಯಾರ್ಥಿ ಡೆರಿನ್, ತನ್ನ ಐಫೋನ್ 6 ಪ್ಲಸ್ ಮೊಬೈಲ್ ಅನ್ನು ಪ್ಯಾಂಟ್ ನ ಹಿಂಬದಿ ಜೇಬಿನಲ್ಲಿಟ್ಟುಕೊಂಡು ಕ್ಲಾಸ್ ರೂಂನಲ್ಲಿ ಕುಳಿತಿದ್ದ. 9.45ರ ವೇಳೆಗೆ ತರಗತಿ ಆರಂಭವಾಗಿತ್ತು. ಮೊದಲು ಜೇಬಿನಲ್ಲಿದ್ದ ಮೊಬೈಲ್ ನಿಂದ ಹೊಗೆ ಬರಲಾರಂಭಿಸಿತ್ತು, ನಂತರ ಅದು ಸ್ಫೋಟಗೊಂಡಿದೆ.
ವಿದ್ಯಾರ್ಥಿಯ ಹಿಂಬದಿ ಸ್ಫೋಟದ ರಭಸಕ್ಕೆ ಸುಟ್ಟು ಹೋಗಿದೆ. ಬಿಸಿಯ ಅನುಭವವಾಗ್ತಿದ್ದಂತೆ ಫೋನ್ ತೆಗೆದು ನೆಲಕ್ಕೆ ಬಿಸಾಡಿದ ಡೆರಿನ್, ಕಾಲಿನಿಂದ ಹೊಸಕಿ ಬೆಂಕಿ ಆರಿಸಿದ್ದಾನೆ. ಐ ಫೋನ್ ಸ್ಫೋಟಗೊಳ್ಳುತ್ತಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದಷ್ಟೆ ಆಸ್ಟ್ರೇಲಿಯಾದಲ್ಲೂ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಗಾಯಗೊಂಡಿದ್ದ.