ಕೆಲವೊಮ್ಮೆ ವೈದ್ಯರು ಮಾಡುವ ಯಡವಟ್ಟುಗಳಿಂದಾಗಿ ರೋಗಿಗಳು ಜೀವನ ಪೂರ್ತಿ ನರಳುವಂತಾಗುತ್ತದೆ. ಖಾಯಿಲೆ ಇಲ್ಲದಿದ್ದರೂ ಖಾಯಿಲೆ ಇರುವ ಮಾತ್ರೆ ಕೊಟ್ಟು ಜೀವನ ಹಾಳು ಮಾಡುವ ವೈದ್ಯರಿಗೇನೂ ಕಡಿಮೆಯಿಲ್ಲ. ಪೋರ್ಚುಗಲ್ ನ 61 ವರ್ಷದ ರುಫಿನೋ ಬೊರೇಗೋ ಕೂಡ ವೈದ್ಯರ ತಪ್ಪು ವರದಿಯಿಂದಾಗಿ ತಮ್ಮ ಅಮೂಲ್ಯ ಜೀವನವನ್ನು ಗಾಲಿ ಖುರ್ಚಿಯಲ್ಲಿ ಕಳೆದಿದ್ದಾರೆ.
ರುಫಿನೋ 13 ವರ್ಷದಲ್ಲಿರುವಾಗ ಪರೀಕ್ಷೆ ನಡೆಸಿದ ವೈದ್ಯರು ರುಫಿನೋಗೆ ಸ್ನಾಯುಕ್ಷಯವಿದೆ ಎಂದಿದ್ದಾರೆ. ಇದನ್ನು ಗುಣಪಡಿಸಲು ಸಾಧ್ಯವಿಲ್ಲ. ಚಿಕಿತ್ಸೆ ಇಲ್ಲದ ಕಾರಣ ಗಾಲಿಕುರ್ಚಿಯಲ್ಲಿಯೇ ಜೀವನ ಸವೆಸಬೇಕೆಂದಿದ್ದಾರೆ. ಹಾಗಾಗಿ ರುಫಿನೋ ಗಾಲಿಕುರ್ಚಿಯಲ್ಲಿ 43 ವರ್ಷ ಕಳೆದಿದ್ದಾರೆ.
ಆದ್ರೆ ರುಫಿನೋ ಆಶ್ಚರ್ಯಪಡುವಂತಹ ಘಟನೆ 43 ವರ್ಷದ ನಂತ್ರ ನಡೆದಿದೆ. ಅವರನ್ನು ಪರೀಕ್ಷೆ ನಡೆಸಿದ ವೈದ್ಯರೊಬ್ಬರು ರುಫಿನೋಗೆ ಸ್ನಾಯು ಕ್ಷಯವೇ ಇಲ್ಲ ಎಂದಿದ್ದಾರೆ. ರುಫಿನೋ ಸ್ನಾಯು ದೌರ್ಬಲ್ಯದಿಂದ ಬಳಲ್ತಿದ್ದಾರೆ. ಇದಕ್ಕೆ ಚಿಕಿತ್ಸೆ ಇದೆ ಎಂದಿದ್ದಾರೆ. 2011ರಲ್ಲಿ ರುಫಿನೋ ಚಿಕಿತ್ಸೆ ಮಾಡಿಸಿಕೊಂಡಿದ್ದು, 61ನೇ ವಯಸ್ಸಿನ ರುಫಿಯೋ ಈಗ ಆರಾಮವಾಗಿ ನಡೆದಾಡುತ್ತಿದ್ದಾರೆ. ತಿಂಗಳಿಗೆರಡು ಬಾರಿ ಅವರು ಚಿಕಿತ್ಸೆ ಪಡೆಯಬೇಕಾಗಿದೆ. ಇಷ್ಟಾದ್ರೂ ರುಫಿನೋ ತಪ್ಪು ವರದಿ ನೀಡಿದ ಆಸ್ಪತ್ರೆ ವಿರುದ್ಧ ದೂರು ನೀಡಿಲ್ಲ.