ಮಕ್ಕಳಿಂದ ವೃದ್ಧರವರೆಗೆ ಬಾಯಿ ಚಪ್ಪರಿಸಿ ತಿನ್ನುವ 550 ಟನ್ ಮ್ಯಾಗಿಯನ್ನು ನಾಶಗೊಳಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಹಿಂದಿನ ವರ್ಷ ಮ್ಯಾಗಿ ಮೇಲೆ ಹೇರಲಾಗಿದ್ದ ಬ್ಯಾನ್ ನಂತ್ರ 550 ಟನ್ ಮ್ಯಾಗಿ ಗೋದಾಮಿನಲ್ಲಿತ್ತು. ಇದರ ಬಳಕೆಯ ಅವಧಿ ಮುಗಿದಿದ್ದರಿಂದ ಇದನ್ನು ನಾಶಗೊಳಿಸಲು ನೆಸ್ಲೆ ಕಂಪನಿ ಅನುಮತಿ ಕೇಳಿತ್ತು. ಈಗ ಕೋರ್ಟ್ ಅನುಮತಿ ನೀಡಿದ್ದು, ನೆಸ್ಲೆ ಕಂಪನಿ 550 ಟನ್ ಮ್ಯಾಗಿಯನ್ನು ನಾಶಪಡಿಸಲಿದೆ.
ಮೊದಲ ನಿಷೇಧದ ನಂತ್ರ ನೆಸ್ಲೆ ಕಂಪನಿ ಗೋದಾಮಿನಲ್ಲಿದ್ದ 38 ಸಾವಿರ ಟನ್ ಮ್ಯಾಗಿಯನ್ನು ನಾಶಪಡಿಸಿತ್ತು. ಸೀಸದ ಪ್ರಮಾಣ ಜಾಸ್ತಿ ಇರುವ ಮ್ಯಾಗಿಯನ್ನು ನಾಶಪಡಿಸಲು ನೆಸ್ಲೆ ಕಂಪನಿ ಸುಪ್ರೀಂ ಕೋರ್ಟ್ ನಲ್ಲಿ ಅನುಮತಿ ಕೋರಿತ್ತು.
2015 ರಲ್ಲಿ ಭಾರತದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಪ್ರಾಧಿಕಾರ ದೇಶದಾದ್ಯಂತ ಮ್ಯಾಗಿ ನಿಷೇಧ ಹೇರುವಂತೆ ಸೂಚಿಸಿತ್ತು. ಅನೇಕ ಪ್ರಯೋಗಾಲಯಗಳಲ್ಲಿ ನಡೆದ ಗುಣಮಟ್ಟದ ಪರೀಕ್ಷೆ ವೇಳೆ ಮ್ಯಾಗಿ ಫೇಲ್ ಆದ ಕಾರಣ ಈ ತೀರ್ಮಾನಕ್ಕೆ ಬರಲಾಗಿತ್ತು. ಹಾಗಾಗಿ ಅನೇಕ ತಿಂಗಳುಗಳ ಕಾಲ ಮಾರುಕಟ್ಟೆಗೆ ಮ್ಯಾಗಿ ಬಂದಿರಲಿಲ್ಲ.