1996ರಲ್ಲಿ ಉಮೇಶ್ ರೆಡ್ಡಿ ಚಿತ್ರದುರ್ಗದಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. 20 ವರ್ಷಗಳ ನಂತರ ಇದೀಗ ಸುಪ್ರೀಂ ಕೋರ್ಟ್ ಉಮೇಶ್ ರೆಡ್ಡಿಗೆ ಮರಣದಂಡನೆ ಖಾಯಂಗೊಳಿಸಿದೆ.
ಅತ್ಯಾಚಾರ ಕೊಲೆ ಸೇರಿದಂತೆ 21 ಪ್ರಕರಣಗಳ ಪೈಕಿ ಬಹುತೇಕ ಪ್ರಕರಣಗಳಲ್ಲಿ ಉಮೇಶ್ ರೆಡ್ಡಿ ಅಪರಾಧಿ ಅಂತಾ ಸಾಬೀತಾಗಿದೆ. ವಿಕೃತ ಕಾಮಿ ಉಮೇಶ್ ರೆಡ್ಡಿಯ ಪ್ರಮುಖ ಟಾರ್ಗೆಟ್ ಗೃಹಿಣಿಯರು. ಮನೆಯಲ್ಲಿ ಗಂಡಸರಿಲ್ಲದ ವೇಳೆ ಅಂದ್ರೆ ಮಧ್ಯಾಹ್ನದ ಹೊತ್ತು ವಿಳಾಸ ಅಥವಾ ನೀರು ಕೇಳಿಕೊಂಡು ಆತ ಬರುತ್ತಿದ್ದ. ಚಾಕು ತೋರಿಸಿ ಬೆದರಿಸಿ ಅವರ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡ್ತಾ ಇದ್ದ.
ಮಹಿಳೆಯರನ್ನು ಕಟ್ಟಿಹಾಕಿ ಅವರ ಮೇಲೆ ದೌರ್ಜನ್ಯವೆಸಗುತ್ತಿದ್ದ ಪಾತಕಿ, ಅದನ್ನು ದರೋಡೆಯಂತೆ ಬಿಂಬಿಸಲು ಅವರ ಮೈಮೇಲಿದ್ದ ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದ. ಚಿತ್ರದುರ್ಗ ಮೂಲದ ಉಮೇಶ್ ರೆಡ್ಡಿ ಸಿಆರ್ ಪಿಎಫ್ ಯೋಧನಾಗಿದ್ದ. ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕಮಾಂಡಂಟ್ ಒಬ್ಬರ ಪುತ್ರಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದ. ಬಂಧನಕ್ಕೊಳಗಾದ್ರೂ ತಪ್ಪಿಸಿಕೊಂಡು ಚಿತ್ರದುರ್ಗಕ್ಕೆ ಓಡಿ ಬಂದಿದ್ದ.
1996ರಲ್ಲಿ ಡಿಎಆರ್ ತುಕಡಿ ಸೇರಿಕೊಂಡ, ಅವನ ಪೈಶಾಚಿಕ ಕೃತ್ಯಗಳ ಹಿನ್ನೆಲೆ ಬಗ್ಗೆ ರಾಜ್ಯ ಪೊಲೀಸ್ ಇಲಾಖೆಗೆ ಗೊತ್ತೇ ಇರಲಿಲ್ಲ. ಕರ್ನಾಟಕ, ಮಹಾರಾಷ್ಟ್ರ, ಮತ್ತು ಗುಜರಾತ್ ನಲ್ಲಿ ಉಮೇಶ್ ರೆಡ್ಡಿ ನೀಚ ಕೃತ್ಯಗಳನ್ನು ಎಸಗಿದ್ದಾನೆ. 20 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಅವರಲ್ಲಿ 18 ಮಂದಿಯನ್ನು ಕೊಂದು ಹಾಕಿದ್ದಾನೆ.