ಮಂಡ್ಯ: ಅಕ್ರಮ ಸಂಬಂಧದ ಕಾರಣಕ್ಕೆ ಸಂಸಾರಗಳು ಹಾಳಾದ ಅನೇಕ ಘಟನೆಗಳು ನಡೆದಿವೆ. ಆದರೂ, ಎಚ್ಚೆತ್ತುಕೊಳ್ಳದ ಕೆಲವರು ಯಡವಟ್ಟು ಮಾಡಿಕೊಳ್ಳುತ್ತಾರೆ. ಹೀಗೆ ವಿವಾಹಿತೆಯೊಬ್ಬಳು ಮಾಡಿಕೊಂಡ ಯಡವಟ್ಟಿನ ಸ್ಟೋರಿ ಇಲ್ಲಿದೆ ನೋಡಿ.
ಮದುವೆಯಾಗಿ ಇಬ್ಬರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ ಗೃಹಿಣಿಯೊಬ್ಬಳು, ಗಂಡನನ್ನು ಬಿಟ್ಟು ಬೇರೆ ಯುವಕನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದು, ಆತನೊಂದಿಗೇ ಮದುವೆಯಾಗಲು ಮುಂದಾಗಿದ್ದಾಳೆ. ಆದರೆ, ಆಕೆಗೆ ಕೈ ಕೊಟ್ಟ ಪ್ರಿಯಕರ ಮದುವೆಯಾಗಲ್ಲ ಎಂದು ಹೇಳಿದ್ದಾನೆ. 6 ವರ್ಷದ ಹಿಂದೆ ಮದುವೆಯಾಗಿ ಮಂಡ್ಯದ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ವಾಸವಾಗಿದ್ದ ಮಹಿಳೆಗೆ ಎದುರು ಮನೆ ಯುವಕನೊಂದಿಗೆ ಅಕ್ರಮ ಸಂಬಂಧ ಬೆಳೆದಿದೆ.
ಆಕೆ ಗಂಡ ಮಕ್ಕಳನ್ನು ತೊರೆದು, ಪ್ರಿಯಕರನ ಮನೆಗೆ ಬಂದು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಪ್ರಿಯಕರ ಉಲ್ಟಾ ಹೊಡೆದಿದ್ದಾನೆ. ಈ ವಿಷಯ ಗೊತ್ತಾಗಿ, ಗಂಡನ ಮನೆಯವರು ಬಂದು ಇಬ್ಬರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಅತ್ತ ಗಂಡ ಮಕ್ಕಳಿಂದ ದೂರವಾಗಿ, ಇತ್ತ ಪ್ರಿಯಕರನಿಗೂ ಬೇಡವಾಗಿ ಮಹಿಳೆ ಯಡವಟ್ಟು ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.