ಕ್ರೀಡಾಪಟುಗಳು ಹಾಗೂ ಬಾಲಿವುಡ್ ಮಂದಿಯ ನಡುವಿನ ನಂಟು ಹೊಸದೇನೂ ಅಲ್ಲ. ಈ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದ್ದು, ಕ್ರೀಡಾಪಟುಗಳ ಜೀವನಾಧರಿತ ಹಲವು ಚಿತ್ರಗಳು ಬಾಲಿವುಡ್ ನಲ್ಲಿ ತೆರೆ ಕಂಡು ಯಶಸ್ವಿಯಾಗಿವೆ.
ಇದೀಗ ಬಾಲಿವುಡ್ ನಟಿ ಹಾಗೂ ಮಾಜಿ ಮಿಸ್ ಇಂಡಿಯಾ ಇಶಾ ಗುಪ್ತಾ, ಖ್ಯಾತ ಫುಟ್ಬಾಲ್ ಆಟಗಾರನ ಜೊತೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಫುಟ್ಬಾಲ್ ಪ್ರೇಮಿಯೂ ಆಗಿರುವ ಇಶಾ ಗುಪ್ತಾ ತಮ್ಮನ್ನು ಅರ್ಸೆಲರ್ ತಂಡದ ಅಭಿಮಾನಿ ಎಂದು ಹೇಳಿಕೊಂಡಿದ್ದು, ಇದೀಗ ಅರ್ಸೆಲರ್ ತಂಡದ ಹೆಕ್ಟರ್ ಬೆಲಿರಿನ್ ಜೊತೆ ಕಾಣಿಸಿಕೊಳ್ಳುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ.
ಲಂಡನ್ ನಲ್ಲಿ ಅರ್ಸೆಲರ್ ತಂಡದ ಪಂದ್ಯವೊಂದನ್ನು ವೀಕ್ಷಿಸಿದ್ದ ಇಶಾ ಗುಪ್ತಾ, ಆಟಗಾರರ ಜೊತೆಗಿನ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಇದಾದ ನಂತರ ಹೆಕ್ಟರ್ ಬೆಲಿರಿನ್ ರ ಜೊತೆ ಅವರ ಮರ್ಸಿಡೀಸ್ ಬೆಂಜ್ C450 ಕಾರಿನಲ್ಲಿ ಸಸ್ಯಹಾರಿ ರೆಸ್ಟೋರೆಂಟ್ ವೆನಿಲ್ಲಾ ಬ್ಲಾಕ್ ಗೆ ಬಂದು ಔತಣ ಸವಿದಿದ್ದಾರೆ. ಇಬ್ಬರೂ ಜೊತೆಗಿರುವ ವೇಳೆ ಸಾರ್ವಜನಿಕರೊಬ್ಬರು ಫೋಟೋ ಸೆರೆ ಹಿಡಿದು ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.