ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಸೇನಾ ಮುಖ್ಯ ಕಚೇರಿ ಮೇಲೆ, ಉಗ್ರರು ದಾಳಿ ನಡೆಸಿ, 18 ಯೋಧರು ಹುತಾತ್ಮರಾದ ನಂತರ, ಭಾರತ ಮತ್ತು ಪಾಕ್ ನಡುವೆ ಸಂಬಂಧ ಹದಗೆಟ್ಟಿದೆ.
ಇದೇ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ‘ಎಂ.ಎಸ್.ಧೋನಿ-ದಿ ಅನ್ ಟೋಲ್ಡ್ ಸ್ಟೋರಿ’ ಚಿತ್ರದ ಪ್ರದರ್ಶನಕ್ಕೆ ಪಾಕಿಸ್ತಾನದಲ್ಲಿ ವಿರೋಧ ವ್ಯಕ್ತವಾಗಿದೆ. ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಭಾರತದಲ್ಲಿರುವ ಪಾಕಿಸ್ತಾನ ಕಲಾವಿದರೆಲ್ಲಾ ಜಾಗ ಖಾಲಿ ಮಾಡಬೇಕೆಂದು ತಾಕೀತು ಮಾಡಿತ್ತು.
ಇದರಿಂದಾಗಿ ಪಾಕ್ ಕಲಾವಿದರೆಲ್ಲಾ ಜಾಗ ಖಾಲಿ ಮಾಡಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಥಿಯೇಟರ್ ಗಳಲ್ಲಿ ‘ಎಂ.ಎಸ್.ಧೋನಿ-ದಿ ಅನ್ ಟೋಲ್ಡ್ ಸ್ಟೋರಿ’ ಚಿತ್ರವನ್ನು ನಿಷೇಧಿಸಬೇಕೆಂದು ಮೂಲಭೂತವಾದಿಗಳು ಕರೆ ನೀಡಿದ್ದಾರೆ.