Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಮೋಟೊ ಜಿ4 ಪ್ಲೇ ಸ್ಮಾರ್ಟ್ ಫೋನ್ ವಿಶೇಷತೆಗಳೇನು?

$
0
0
ಮೋಟೊ ಜಿ4 ಪ್ಲೇ ಸ್ಮಾರ್ಟ್ ಫೋನ್ ವಿಶೇಷತೆಗಳೇನು?

ಮೋಟೊರೊಲಾದ ಮೋಟೊ ಜಿ4 ಪ್ಲೇ ಸ್ಮಾರ್ಟ್ ಫೋನ್ ಭಾರತದಲ್ಲಿ ಲಭ್ಯವಾಗುತ್ತಿದೆ. 8,999 ರೂ.ಗಳಿಗೆ ದೊರೆಯುತ್ತಿರುವ ಈ ಫೋನ್ ಅನ್ನು ಆನ್ ಲೈನ್ ಶಾಪಿಂಗ್ ತಾಣವಾದ ಅಮೆಜಾನ್ ನಲ್ಲಿ ಖರೀದಿಸಬಹುದಾಗಿದೆ.

ಮೋಟೊ ಜಿ4 ಪ್ಲೇ ಸ್ಮಾರ್ಟ್ ಫೋನ್ 720×1280 ಪಿಕ್ಸೆಲ್ ರೆಸಲ್ಯೂಶನ್ ನೊಂದಿಗೆ 5 ಇಂಚಿನ ಡಿಸ್ ಪ್ಲೇ ಹೊಂದಿದೆ. ಇದು 6.0 ಮಾರ್ಶ್ ಮೈಲೋ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 1.4 gHz ಕ್ವಾಡ್ ಕೋರ್ ಕ್ವಾಲ್ಕಮ್ ಸ್ನ್ಯಾಪ್ ಡ್ರ್ಯಾಗನ್ 410 ಪ್ರೊಸೆಸರ್ ಮತ್ತು 2 ಜಿಬಿಯ ರ್ಯಾಮ್  ಸೌಲಭ್ಯ ಇದೆ. ಇದರ ಹೊರತಾಗಿ 16 ಜಿಬಿಯ ಆಂತರಿಕ ಮೆಮೊರಿ ಇರಲಿದ್ದು, ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 ಜಿಬಿಯ ತನಕ ಹೆಚ್ಚಿಸಿಕೊಳ್ಳಬಹುದಾಗಿದೆ.

ಎಲ್ಇಡಿ ಪ್ಲ್ಯಾಶ್ ಹೊಂದಿರುವ 8 ಮೆಗಾ ಪಿಕ್ಸೆಲ್ ನ ರಿಯರ್ ಕ್ಯಾಮರಾ ಮತ್ತು 5 ಮೆಗಾ ಪಿಕ್ಸೆಲ್ ನ ಫ್ರಂಟ್ ಕ್ಯಾಮರಾ ಇದರಲ್ಲಿದೆ. ಸಂಪರ್ಕ ಸೌಲಭ್ಯಕ್ಕಾಗಿ 4ಜಿ ಎಲ್ ಟಿ ಇ, 3ಜಿ, ವೈಫೈ, ಬ್ಲ್ಯೂ ಟೂತ್ ಮತ್ತು ಜಿಪಿಎಸ್ ಮುಂತಾದ ಸೌಲಭ್ಯಗಳು ಈ ಫೋನಿನಲ್ಲಿವೆ. ಬಹುಬೇಗ ಚಾರ್ಜ್ ಆಗಲು ಸಹಾಯವಾಗುವಂತ 2800 ಎಂಎಎಚ್ ಬ್ಯಾಟರಿಯನ್ನು ಮೋಟೊ ಜಿ4 ಪ್ಲೇ ಸ್ಮಾರ್ಟ್ ಫೋನ್ ಹೊಂದಿದೆ. ಈ ಎಲ್ಲ ಸೌಲಭ್ಯ ಹೊಂದಿರುವ ಮೋಟೊ ಜಿ4, xiaomi ರೆಡ್ ಮಿ 3ಎಸ್ ಮತ್ತು ಕೂಲ್ ಪ್ಯಾಡ್ ಮೆಗಾ 2.5 ಡಿ ಮೊಬೈಲಿಗೆ ತೀವ್ರ ಪೈಪೋಟಿ ನೀಡುತ್ತಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>