ಆಸ್ಟ್ರೇಲಿಯಾದ ಆಶ್ಲೇ ಎಂಬಾಕೆ ಮೂರು ಮಕ್ಕಳ ತಂದೆಯಾಗಿರುವ ತನ್ನ ಅಣ್ಣನಿಗಾಗಿ ಬಾಡಿಗೆ ತಾಯಿಯಾಗಿದ್ದಾಳೆ. ಆಕೆಯ ಅಣ್ಣ ಡೇವಿಡ್, ಗೇ. ಆತ ಇನ್ನೊಂದು ಮಗುವನ್ನು ಬಯಸಿದ್ದ. ಆದ್ರೆ ಸಲಿಂಗವಾಗಿದ್ದರಿಂದ ಮಗು ಪಡೆಯಲು ಸಾಧ್ಯವಿರಲಿಲ್ಲ. ಹಾಗಾಗಿ ಅಣ್ಣನಿಗೆ ಖುಷಿ ನೀಡಲು ಆಶ್ಲೇ ಮುಂದಾಗಿದ್ದಾಳೆ. ಬಾಡಿಗೆ ತಾಯಿಯಾಗಿ ಮುದ್ದಾದ ಗಂಡು ಮಗುವನ್ನು ಹೆತ್ತು ಕೊಟ್ಟಿದ್ದಾಳೆ.
ಡೇವಿಡ್ ಹಾಗೂ ಆತನ ಎಂಟು ವರ್ಷದ ಸಂಗಾತಿ ಬ್ರೆಂಡನ್ ಮಗು ಬೇಕೆಂದು ಬಯಸಿದ್ದರು. ಆದ್ರೆ ಅದು ಅಸಾಧ್ಯ ಎಂಬುದು ಅವರಿಗೆ ಗೊತ್ತಿತ್ತು. ಮಗುವಿನ ಕನಸು ಕಾಣ್ತಿದ್ದ ಅಣ್ಣನ ಆಸೆ ಪೂರೈಸಲು ಆಶ್ಲೇ ನಿರ್ಧರಿಸಿದಳು. ಒಬ್ಬ ದಾನಿಯ ಎಗ್ ಮತ್ತು ಬ್ರೆಂಡನ್ ನ ವೀರ್ಯದ ಸಹಾಯದಿಂದ ಆಶ್ಲೇ ಗರ್ಭ ಧರಿಸಿದ್ಲು. ಕೆಲ ದಿನಗಳ ಹಿಂದೆ ಗಂಡು ಮಗುವಿಗೆ ಆಶ್ಲೇ ಜನ್ಮ ನೀಡಿದ್ದಾಳೆ.
ಡೇವಿಡ್ ಹಾಗೂ ಆತನ ಸಂಗಾತಿ ಬ್ರೆಂಡನ್ ಈಗ ಖುಷಿಯಾಗಿದ್ದಾರೆ.ಅಣ್ಣನ ಕೈಗೆ ಮಗು ಕೊಟ್ಟಾಗ ಅಣ್ಣ ತುಂಬಾ ಖುಷಿಯಾಗಿದ್ದ. ಅಣ್ಣನ ಖುಷಿಯೇ ನನ್ನ ಖುಷಿ ಎಂದಿದ್ದಾಳೆ ಆಶ್ಲೇ.