Xiaomi ಕಂಪನಿ ಚೀನಾದಲ್ಲಿ ನಡೆದ ಒಂದು ಸಮಾರಂಭದಲ್ಲಿ mi 5s ಬಿಡುಗಡೆಗೊಳಿಸಿದೆ. ಗೋಲ್ಡ್, ರೋಸ್ ಗೋಲ್ಡ್, ಸಿಲ್ವರ್ ಮತ್ತು ಬಿಳಿ ಬಣ್ಣದಲ್ಲಿ ಈ ಫೋನ್ ಲಭ್ಯವಿದೆ.
ಮೆಟಲ್ ಬಾಡಿ ಹೊಂದಿರುವ ಎರಡು ವಿಧದ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. ಇವುಗಳ ಪೈಕಿ ಒಂದರಲ್ಲಿ 3 ಜಿಬಿಯ ರ್ಯಾಮ್/64 ಜಿಬಿಯ ಫೋನ್ 20,000 ರೂ. ಹಾಗೂ 4 ಜಿಬಿ ರ್ಯಾಮ್/128 ಜಿಬಿಯ ಫೋನ್ ಅಂದಾಜು 22,900 ರೂ. ಗಳಲ್ಲಿ ಸಿಗಲಿದೆ.
Xiaomi mi 5s ಸ್ಮಾರ್ಟ್ ಫೋನ್ ಮೆಟಲ್ ಯುನಿಬಾಡಿ ಹೊಂದಿದ್ದು 5.51 ಇಂಚಿನ 1920×1080 ಫಿಕ್ಸೆಲ್ ರೆಸೊಲ್ಯೂಶನ್ ಸ್ಕ್ರೀನ್ ಹೊಂದಿದೆ. ಡಿಸ್ ಪ್ಲೇ ಯ ಬ್ರೈಟ್ ನೆಸ್ ಅನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತ 16 ಅಲ್ಟ್ರಾ ಬ್ರೈಟ್ ಎಲ್ಇಡಿ ಲೈಟ್ ಮತ್ತು ಡಿಸ್ ಪ್ಲೇ ಕೆಳಗಿನ ಹೋಮ್ ಬಟನ್ ನಲ್ಲಿ ಅಲ್ಟ್ರಾ ಸೋನಿಕ್ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಇದು ಹೊಂದಿದೆ.
Xiaomi mi 5s ನಲ್ಲಿ 2.15 gHz ಕ್ವಾಲ್ಕಮ್ ಸ್ನ್ಯಾಪ್ ಡ್ರ್ಯಾಗನ್ 821 ಪ್ರೊಸೆಸರ್ ನೀಡಲಾಗಿದೆ. ಗ್ರಾಫಿಕ್ಸ್ ಸೌಲಭ್ಯಕ್ಕಾಗಿ ಅಡ್ರೆನೋ 530 ಜಿಪಿಯೂ ಇದೆ. ಎಲ್ಇಡಿ ಫ್ಲ್ಯಾಶ್, ಪಿಡಿಎಎಫ್ ಮತ್ತು ಅಪರ್ಚರ್ ಎಫ್/2.0 ಹೊಂದಿರುವ 12 ಮೆಗಾಫಿಕ್ಸೆಲ್ ರಿಯರ್ ಕ್ಯಾಮರಾವನ್ನು Xiaomi mi 5s ಹೊಂದಿದೆ. ಅಪರ್ಚರ್ ಎಫ್/2.0 ದೊಂದಿಗೆ 4 ಮೆಗಾಫಿಕ್ಸೆಲ್ ನ ಫ್ರಂಟ್ ಕ್ಯಾಮರಾ ಮತ್ತು 3.0 ತಂತ್ರಜ್ಞಾನದಿಂದ ಕೂಡಿದ 3300 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಫೋನ್ ಇದಾಗಿದೆ.