ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಇಂದು ಚುನಾವಣೆ ನಡೆಯಲಿದೆ.
ಮೇಯರ್ ಆಗಿ ಕಾಂಗ್ರೆಸ್ ನ ಪದ್ಮಾವತಿ, ಉಪಮೇಯರ್ ಆಗಿ ಜೆ.ಡಿ.ಎಸ್.ನ ಆನಂದ್ ಆಯ್ಕೆಯಾಗಬಹುದೆಂದು ಹೇಳಲಾಗಿದೆ. ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಹಿಂದಿನ ಅವಧಿಯಲ್ಲಿ ಮಾಡಿಕೊಂಡಿದ್ದ ಮೈತ್ರಿ ಈ ಅವಧಿಗೂ ಮುಂದುವರೆದಿದೆ. ಪ್ರಾದೇಶಿಕ ಚುನಾವಣೆ ಆಯುಕ್ತರಾದ ಜಯಂತಿ ನೇತೃತ್ವದಲ್ಲಿ ಚುನಾವಣೆ ನಡೆಯಲಿದ್ದು, ಒಟ್ಟು 269 ಸದಸ್ಯರು ಮತ ಚಲಾಯಿಸಲಿದ್ದಾರೆ.
ಕಾಂಗ್ರೆಸ್ 76 ಸದಸ್ಯರು, ಶಾಸಕರು 13, ಪರಿಷತ್ ಸದಸ್ಯರು 15, ಸಂಸದರು 2, ರಾಜ್ಯಸಭೆ ಸದಸ್ಯರು 6, ಜೆ.ಡಿ.ಎಸ್.ನ 14 ಸದಸ್ಯರು, ಶಾಸಕರು 3, ಪರಿಷತ್ ಸದಸ್ಯರು 5, ರಾಜ್ಯಸಭೆ ಸದಸ್ಯರು ಒಬ್ಬರು ಇದ್ದಾರೆ.
ಬಿ.ಜೆ.ಪಿ.ಯ 99 ಸದಸ್ಯರು, 12 ಶಾಸಕರು, 8 ಪರಿಷತ್ ಸದಸ್ಯರು, ಲೋಕಸಭೆ 3, ರಾಜ್ಯಸಭೆ 3 ಸದಸ್ಯರಿದ್ದಾರೆ.