Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಗಳಿಕೆಯಲ್ಲಿ ಹೊಸ ದಾಖಲೆ ಬರೆದ ‘ಕೋಟಿಗೊಬ್ಬ-2’

$
0
0
ಗಳಿಕೆಯಲ್ಲಿ ಹೊಸ ದಾಖಲೆ ಬರೆದ ‘ಕೋಟಿಗೊಬ್ಬ-2’

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಕನ್ನಡ ಹಾಗೂ ತಮಿಳಿನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ರಿಪೀಟ್ ಆಡಿಯನ್ಸ್ ಹೆಚ್ಚಾಗುತ್ತಿದ್ದಾರೆ.

ಸುದೀಪ್ ವೃತ್ತಿ ಬದುಕಿನ ಯಶಸ್ವಿ ಚಿತ್ರಗಳಲ್ಲಿ ಒಂದಾಗಿರುವ ‘ಕೋಟಿಗೊಬ್ಬ-2’ ಕನ್ನಡ ಹಾಗೂ ತಮಿಳಿನ ನಂತರದಲ್ಲಿ ತೆಲುಗು ಮತ್ತು ಹಿಂದಿಯಲ್ಲೂ ತೆರೆ ಕಾಣಲಿದೆ. ಫ್ಯಾಮಿಲಿ ಆಡಿಯನ್ಸ್ ಕೂಡ ಅಟ್ರ್ಯಾಕ್ಟ್ ಆಗಿದ್ದು, ಕೋಟಿಗೊಬ್ಬನ ಹವಾ ಮುಂದುವರೆದಿದೆ. ಬಾಕ್ಸ್ ಆಫೀಸ್ ನಲ್ಲಿ ಹಿಂದೆಂದೂ ಸುದೀಪ್ ಸಿನಿಮಾಗಳು ಗಳಿಸದಷ್ಟು ಹಣವನ್ನು ಗಳಿಸಿರುವ ಹೆಗ್ಗಳಿಕೆ ಈ ಚಿತ್ರದ್ದಾಗಿದೆ ಎಂದು ಹೇಳಲಾಗಿದೆ.

ಸುದೀಪ್ ‘ಕೋಟಿಗೊಬ್ಬ-2’ ಮೂಲಕ ಸೌತ್ ಇಂಡಿಯಾ ಸ್ಟಾರ್ ಆಗಿ ರೂಪುಗೊಂಡಿದ್ದಾರೆ. ಈ ಚಿತ್ರ ಇದುವರೆಗಿನ ಗಳಿಕೆ 50 ಕೋಟಿ ರೂ. ದಾಟಿದ್ದು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ಬರೆದಿದೆ ಎನ್ನಲಾಗಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>