‘ಅಕಿರಾ’ ಚಿತ್ರಕ್ಕಾಗಿ ದಿನ- ರಾತ್ರಿ ಎನ್ನದೆ ಶೂಟಿಂಗ್ ಮಾಡಿದ್ದ ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಈಗ ರಜೆಯಲ್ಲಿದ್ದಾಳೆ. ವಿಶ್ರಾಂತಿಗಾಗಿ ಪೂರ್ವ ಆಫ್ರಿಕಾದ ದ್ವೀಪ ರಾಷ್ಟ್ರ ಸೀಶೆಲ್ಸ್ ಗೆ ಹೋಗಿರುವ ಸೋನಾಕ್ಷಿ ಅಲ್ಲಿನ ಬೀಚ್, ಸುಂದರ ಪ್ರಕೃತಿ ಸೌಂದರ್ಯದ ನಡುವೆ ರಜೆಯ ಮಜಾ ಅನುಭವಿಸ್ತಿದ್ದಾಳೆ.
ಸೀಶೆಲ್ಸ್ ನ ಕೆಲವೊಂದು ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾಳೆ ಸೋನಾಕ್ಷಿ. ಬಿಕಿನಿ ತೊಟ್ಟು ಸಮುದ್ರಕ್ಕಿಳಿದಿರುವ ಫೋಟೋವೊಂದನ್ನೂ ಸೋನಾಕ್ಷಿ ಹಾಕಿದ್ದಾಳೆ. ಇಂಥ ಪರಿಸರ ನನಗೆ ತುಂಬಾ ಇಷ್ಟ. ಸಮುದ್ರ ಮತ್ತು ನಾನು ಎಂದು ಬರೆದುಕೊಂಡಿದ್ದಾಳೆ.
‘ಅಕಿರಾ’ ಚಿತ್ರಕ್ಕಾಗಿ ಸೋನಾಕ್ಷಿ ಸಿಕ್ಕಾಪಟ್ಟೆ ವರ್ಕ್ ಮಾಡಿದ್ದಾಳೆ. ಸದ್ಯ ‘ನೂರ್’ ಚಿತ್ರಕ್ಕೆ ಸಹಿ ಹಾಕಿರುವ ಸೋನಾಕ್ಷಿ, ವಿಶ್ರಾಂತಿ ನಂತ್ರ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾಳೆ.