ಹೈದರಾಬಾದ್: ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ, ಬೆಳ್ಳಿ ಪದಕ ಗಳಿಸಿದ ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರ ಸಕ್ಸಸ್ ಜರ್ನಿ ಮುಂದುವರೆದಿದೆ.
ಸ್ಪೋರ್ಟ್ ಮ್ಯಾನೇಜ್ ಮೆಂಟ್ ಕಂಪನಿಯೊಂದರ ಜೊತೆಗೆ, ಪಿ.ವಿ. ಸಿಂಧು ಗೋಲ್ಡನ್ ಡೀಲ್ ಮಾಡಿಕೊಂಡಿದ್ದಾರೆ. ಇದು ಕ್ರಿಕೆಟ್ ಆಟಗಾರರನ್ನು ಹೊರತುಪಡಿಸಿ ಬೇರೆ ಆಟಗಾರರೊಂದಿಗೆ ಕಂಪನಿ ಮಾಡಿಕೊಂಡಿದ್ದ ಇದುವರೆಗಿನ ಒಪ್ಪಂದಗಳಲ್ಲಿಯೇ ಸಿಂಧು ಜೊತೆಗಿನ ಒಪ್ಪಂದ ಅತಿ ಹೆಚ್ಚಿನ ಮೊತ್ತದ ಒಪ್ಪಂದವಾಗಿದೆ. ಸಿಂಧು ಬರೋಬ್ಬರಿ 50 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಬೇಸ್ ಲೈನ್ ಸ್ಪೋರ್ಟ್ಸ್ ಮ್ಯಾನೇಜ್ ಮೆಂಟ್ ಸಂಸ್ಥೆಯೊಂದಿಗೆ 3 ವರ್ಷ ಅವಧಿಯ 50 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಿಂಧು ಸಹಿ ಹಾಕಿದ್ದಾರೆ.
ಸಿಂಧು ಅವರ ಬ್ರಾಂಡ್ ಪ್ರೊಫೈಲಿಂಗ್, ಜಾಹೀರಾತು ಮೊದಲಾದವುಗಳನ್ನು ಬೇಸ್ ಲೈನ್ ಕಂಪನಿ ನಿರ್ವಹಿಸಲಿದೆ. ಬೇಸ್ ಲೈನ್ ಕಂಪನಿಯ ಸಹ ಸಂಸ್ಥಾಪಕ ತುಹೇನ್ ಮಿಶ್ರಾ ಈ ಕುರಿತು ಮಾಹಿತಿ ನೀಡಿದ್ದು, ಸಿಂಧು ಜನಪ್ರಿಯತೆ ಹೆಚ್ಚಾಗಿದ್ದು, ಈಗಾಗಲೇ 16 ಕಂಪನಿಗಳು ತಮ್ಮ ಉತ್ಪನ್ನಗಳ ಜಾಹೀರಾತಿನಲ್ಲಿ ಪಿ.ವಿ. ಸಿಂಧು ಕಾಣಿಸಿಕೊಳ್ಳಬೇಕೆಂದು ಕೋರಿವೆ ಎಂದು ಹೇಳಿದ್ದಾರೆ.