ಜಮ್ಮು ಕಾಶ್ಮೀರದ ಉರಿಯಲ್ಲಿ ಸೇನಾ ಶಿಬಿರದ ಮೇಲೆ ಪಾಕ್ ಪ್ರೇರಿತ ಉಗ್ರರು ದಾಳಿ ಮಾಡಿದ ವೇಳೆ 18 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದು, ಈ ಘಟನೆಯ ಬಳಿಕ ಪಾಕಿಸ್ತಾನದ ವಿರುದ್ದ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಮಧ್ಯೆ ಗುಜರಾತ್ ನ ಸೂರತ್ ನ 28 ಮಂದಿ ಶಿವಸೇನಾ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಕೂಡಲೇ ಪಾಕಿಸ್ತಾನದ ವಿರುದ್ದ ಯುದ್ದ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೇ ಪಾಕಿಸ್ತಾನವನ್ನು ಸರ್ವನಾಶ ಮಾಡಲು ತಾವುಗಳು ಆತ್ಮಹತ್ಯಾ ಬಾಂಬರ್ ಆಗಲೂ ಸಿದ್ದ ಎಂದು ಹೇಳಿದ್ದಾರೆ. ಜೊತೆಗೆ ಯುದ್ದ ನಡೆದರೆ ಗಾಯಗೊಳ್ಳುವ ಸೈನಿಕರಿಗೆ ನಮ್ಮ ಅಂಗಾಂಗಗಳನ್ನು ನೀಡಲು ಬದ್ದರಾಗಿದ್ದೇವೆ ಎಂದು ಘೋಷಿಸಿದ್ದಾರೆ. ಇದರ ನಡುವೆ ಶಿವಸೇನೆ ಮುಖವಾಣಿ ‘ಸಾಮ್ನಾ’ ದಲ್ಲಿ ಬರೆದ ಸಂಪಾದಕೀಯದಲ್ಲಿ, ಉರಿಯಲ್ಲಿ ನಡೆದ ದಾಳಿ ಬಳಿಕ ವಿಶ್ವದ ಹಲವು ರಾಷ್ಟ್ರಗಳು ಭಯೋತ್ಪಾದನೆ ವಿರುದ್ದ ಕೇವಲ ತೋರಿಕೆಯ ಮಾತುಗಳನ್ನಾಡುತ್ತಿವೆ ಎಂದು ಟೀಕಿಸಲಾಗಿದೆ.