ಕಾನ್ಪುರ್: 500 ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಭಾರತಕ್ಕೆ ಗೆಲುವಿಗೆ 6 ವಿಕೆಟ್ ಬೇಕಿದೆ. ಆದರೆ, ಇಷ್ಟು ವಿಕೆಟ್ ಗಳಲ್ಲಿ 341 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಳ್ಳಲು ನ್ಯೂಜಿಲೆಂಡ್ ಕಾರ್ಯತಂತ್ರ ರೂಪಿಸಿದೆ.
ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ 2 ನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ನ್ಯೂಜಿಲೆಂಡ್ ಗೆಲುವಿಗೆ 434 ರನ್ ಗುರಿ ನೀಡಿತು. 4 ನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 2 ನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ. ಆರ್. ಅಶ್ವಿನ್ 3 ವಿಕೆಟ್ ಪಡೆದರು.
2 ನೇ ಇನ್ನಿಂಗ್ಸ್ ನಲ್ಲಿ ಭಾರತ ಪರ ಚೇತೇಶ್ವರ್ ಪೂಜಾರ್ 78, ಮುರುಳಿ ವಿಜಯ್ 76, ರೋಹಿತ್ ಶರ್ಮ ಅಜೇಯ 68, ಆರ್. ಜಡೇಜ ಅಜೇಯ 50 ರನ್ ಗಳಿಸಿದ್ದು, ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಗೆಲುವಿಗೆ ಇನ್ನೂ 341 ರನ್ ಗಳಿಸಬೇಕಿರುವ ನ್ಯೂಜಿಲೆಂಡ್ ಕೈಯಲ್ಲಿ 6 ವಿಕೆಟ್ ಗಳಷ್ಟೇ ಬಾಕಿ ಇದ್ದು, ಭಾರತದ ಸ್ಪಿನ್ ದಾಳಿಯನ್ನು ಎದುರಿಸುವುದು ಸವಾಲಾಗಿದೆ. ಕೊನೆಯ ದಿನದ ಆಟ ಭಾರೀ ಕುತೂಹಲ ಮೂಡಿಸಿದೆ.
ಭಾರತ ಮೊದಲ ಇನ್ನಿಂಗ್ಸ್ 318 ರನ್ ಗಳಿಗೆ ಆಲ್ ಔಟ್, 2 ನೇ ಇನ್ನಿಂಗ್ಸ್ ನಲ್ಲಿ 377/5 (ಡಿಕ್ಲೇರ್),
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 262 ರನ್ ಗಳಿಗೆ ಆಲ್ ಔಟ್, 2 ನೇ ಇನ್ನಿಂಗ್ಸ್ ನಲ್ಲಿ 93/4